ಸಂಚಾರ ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ

ಬಂಟ್ವಾಳ: ಅಪಘಾತ ತಡೆಯಲು (Speed detection radar gun) ಸ್ಪೀಡ್ ಡಿಟೆಕ್ಷನ್ ರ್ಯಾಡರ್ ಗನ್ ಎಂಬ ಕ್ಯಾಮೆರ ಅಳವಡಿಸಲು ಮುಂದಾಗಿದೆ.
ಸುಮಾರು ರೂ.6 ಲಕ್ಷ ಮೌಲ್ಯದ 6 ಗಂಟೆಗಳ ಕಾಲ ಕೆಲಸ ಮಾಡಲು ಶಕ್ತಿಯನ್ನು ಹೊಂದಿರುವ ಬ್ಯಾಟರಿ ಹೊಂದಿರುವ ಉತ್ತಮ ಗುಣಮಟ್ಟದ ಮತ್ತು ಸೌಂದರ್ಯದ ಕ್ಯಾಮರಾ ಇದಾಗಿದೆ.
ಅತೀ ವೇಗದಿಂದ ವಾಹನಗಳನ್ನು ಚಲಾಯಿಸಿ ಅಪಘಾತಕ್ಕೀಗಿ ಜೀವಹಾನಿಯಾಗುವ ಪ್ರಕರಣಗಳು ಮತ್ತು ದೊಡ್ಡ ಪ್ರಮಾಣದ ಗಾಯಗಳು ಉಂಟಾಗಿ ಅಪಾಯಕಾರಿ ಸನ್ನಿವೇಶದಲ್ಲಿ ಜೀವನಪರ್ಯಂತ ಕೊರಗುವ ಅನೇಕ ಕುಟುಂಬಗಳು ಕಣ್ಣ ಮುಂದೆ ಇದೆ.