ಬಂಟ್ವಾಳ: ಹಿದಾಯ ಫೌಂಡೇಶನ್ ವತಿಯಿಂದ ಆಧಾರ್ ಶಿಬಿರ
ಬಂಟ್ವಾಳ: ಹಿದಾಯ ಫೌಂಡೇಶನ್ ಮಂಗಳೂರು, ಹಿರಿಯ ವಿದ್ಯಾರ್ಥಿ ಸಂಘ ಕೊಡಂಗೆ ಹಾಗೂ ಆಧಾರ್ ಸೇವಾ ಕೇಂದ್ರ ಮಂಗಳೂರು ಇದರ ಸಹಯೋಗದೊಂದಿಗೆ 3 ದಿವಸಗಳ ಆಧಾರ್ ಶಿಬಿರ ನೇತಾಜಿ ಸುಭಾಶ್ ಚಂದ್ರ ಬೋಸ್ ಸರಕಾರಿ ಫ್ರೌಢ ಶಾಲೆ ಕೊಡಂಗೆ ಯಲ್ಲಿ ನಡೆಯಿತು. 165 ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ಉಪಾಧ್ಯಕ್ಷ ಆಸಿಫ್ ಇಕ್ಬಾಲ್, ಸದಸ್ಯರಾದ ಹಕೀಂ ಕಲಾಯಿ, ಆಶಿಕ್ ಕುಕ್ಕಾಜೆ, ಶಾಲಾ ಮುಖ್ಯೋಪಾದ್ಯಾಯ ಸುಧೀರ್, ಹುಸೈನ್ ಪರ್ಲಿಯಾ, ಇಸ್ಮಾಯಿಲ್ ಪರ್ಲಿಯಾ, ಹನೀಫ್ ಪರ್ಲಿಯಾ ಮತ್ತಿತರರು ಉಪಸ್ಥಿತರಿದ್ದರು.




