March 25, 2026

ತಂದೆಯಿಂದ ವಿನಾಕಾರಣ ಕಿರುಕುಳ: ಮನನೊಂದು‌ ಪುತ್ರ ನೇಣುಬಿಗಿದು ಆತ್ಮಹತ್ಯೆ

0
image_editor_output_image-107123252-1721892293586.jpg

ಹಾಸನ: ತಂದೆಯಿಂದ ವಿನಾಕಾರಣ ಕಿರುಕುಳಕ್ಕೆ ಬೇಸತ್ತು ಮಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಟಿಪ್ಪು ನಗರದಲ್ಲಿ ನಡೆದಿದೆ.

ಅಖಿಲ್ ಪಾಷ(25) ಮೃತ ಯುವಕ. ಸೈಯ್ಯದ್‌ಪಾಷಾ, ಮಗ-ಸೊಸೆಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದ ತಂದೆ. ಮೂರು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಅಖಿಲ್ ಪಾಷಾ.

ಎರಡು ವರ್ಷಗಳಿಂದ ಪತ್ನಿಯೊಂದಿಗೆ ಅರಸೀಕೆರೆಯ ಟಿಪ್ಪು ನಗರದಲ್ಲಿ ವಾಸವಿದ್ದರು. ಆದರೆ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇತರೆ ದಾಖಲಾತಿಗಳು ಹಾಸನದ ತಂದೆಯ ಮನೆಯಲ್ಲಿಟ್ಟಿದ್ದ ಯುವಕ. ತಂದೆಯ ಬಳಿ ದಾಖಲಾತಿಳನ್ನು ಕೇಳಿದರೆ ದಾಖಲಾತಿ ಕೊಡದೇ ಸತಾಯಿಸುತ್ತಿದ್ದ. ಇದರಿಂದ ತಂದೆ ಮಗನ ನಡುವೆ ಗಲಾಟೆಯಾಗಿತ್ತು. ರಾಜೀ ಸಂಧಾನ ಮಾಡಿ ಸಮಾಜದ ಮುಖಂಡರು, ಹಿರಿಯರು ಬಗೆಹರಿಸಿದ್ದರು.

Leave a Reply

Your email address will not be published. Required fields are marked *

error: Content is protected !!