ಚಾಕುವಿನಿಂದ ಇರಿದು ಪೂಜಾರಿಯ ಕೊಲೆ
ಹುಬ್ಬಳ್ಳಿ: ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪೂಜಾರಿಯನ್ನು ಹತ್ಯೆಗೈದಿರುವಂತಹ ಘಟನೆ ಈಶ್ವರ ನಗರದಲ್ಲಿ ನಡೆದಿದೆ.
ವೈಷ್ಣವಿ ದೇವಸ್ಥಾನದ ಪೂಜಾರಿ ದೇವಪ್ಪಜ್ಜ ಬರ್ಬರ ಹತ್ಯೆಗೊಳಗಾದ ವ್ಯಕ್ತಿ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಳೆದ ಒಂದು ವರ್ಷದ ಹಿಂದೆ ಕೂಡ ಸ್ವಾಮೀಜಿ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದರು. ಅಂದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಇಂದು ಸಾವನ್ನಪ್ಪಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.





