ಮಡಿಕೇರಿ: ಗುಂಡು ಹಾರಿಸಿ ಪತ್ನಿಯ ಕೊಲೆ, ಪತಿಯ ಬಂಧನ
ಮಡಿಕೇರಿ: ಕುಟುಂಬ ಕಲಹದಿಂದ ಗುಂಡು ಹಾರಿಸಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಟೋಳಿ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಶಿಲ್ಪಾ ಸೀತಮ್ಮ (38) ಮೃತಪಟ್ಟ ಮಹಿಳೆ, ಗುಂಡು ಹಾರಿಸಿದ ಪತಿ ನಾಯಕಂಡ ಸಿ.ಬೋಪಣ್ಣ (43) ಬಂದೂಕಿನೊಂದಿಗೆ ಪೊಲೀಸರಿಗೆ ಶರಣಾಗಿದ್ದಾರೆ.
ಪತಿ-ಪತ್ನಿ ನಡುವೆ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ಇಂದು ಬೆಳಿಗ್ಗೆ ಇದು ವಿಕೋಪಕ್ಕೆ ತಿರುಗಿ ಬೋಪಣ್ಣ ಅವರು ಶಿಲ್ಪಾ ಸೀತಮ್ಮ ಅವರ ಮೇಲೆ ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ.





