ಬಂಟ್ವಾಳ: ತಾಲೂಕಿನಲ್ಲಿ ಒಂದು ವಾರದಿಂದ ಈಚೆಗೆ ಜೋರಾಗಿದ್ದ ಮಳೆ ಅಬ್ಬರ ಶನಿವಾರ ಕಡಿಮೆಯಾಗಿದೆ. ಶನಿವಾರ ಬೆಳಿಗ್ಗೆಯಿಂದಲೂ ಬಿಸಿಲಿನಿಂದ ಕೂಡಿದ ವಾತಾವರಣವಿದೆ.
ಜಿಲ್ಲೆಯ ನೇತ್ರಾವತಿ ನದಿಯಲ್ಲೂ ನೀರು ಹರಿವಿನ ಮಟ್ಟ ತಗ್ಗಿದೆ. ಬಂಟ್ವಾಳ ಬಳಿ ಶುಕ್ರವಾರ ಅಪಾಯದ ಮಟ್ಟ ಮೀರಿ 8.6 ಮೀ. ವರೆಗೂ ತಲುಪಿದ್ದ ನೀರು ಹರಿವಿನ ಮಟ್ಟ ಶನಿವಾರ 7.4 ಮೀ.ಗೆ ಇಳಿಕೆಯಾಗಿದೆ.