March 25, 2026

ಮಂಗಳೂರು: ಭಾರೀ ಮಳೆಯಿಂದಾಗಿ ಕಸಬಾ ಬೆಂಗ್ರೆ ಪ್ರದೇಶಗಳು ಜಲಾವೃತ

0
image_editor_output_image1678792169-1721379155378.jpg

ಮಂಗಳೂರು: ಮಂಗಳೂರು ನಗರದಲ್ಲಿ ಬಿರುಸಿನ ಮಳೆ ಮುಂದುವರೆದಿದೆ. ಭಾರೀ ಮಳೆಯಿಂದಾಗಿ ಇಲ್ಲಿನ ಕಸಬಾ ಬೆಂಗ್ರೆ ಪ್ರದೇಶದ ನದಿ ತೀರದ ಕೆಲವು ಭಾಗಗಳಲ್ಲಿಕೃತಕ ನೆರೆ ಆವರಿಸಿದೆ.

ಇದೇ ಭಾಗದಲ್ಲಿ ಸಾಗರಮಾಲ ಯೋಜನೆಯ ಕೋಸ್ಟಲ್ ಬರ್ತ್ ಕಾಮಗಾರಿಯ ಕೆಳಭಾಗದಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ಮತ್ತು ಸಹರಾ ಶಾಲೆಯ ಆವರಣ ಗೋಡೆಯ ಒಳಭಾಗಗಳಲ್ಲಿ ಮಳೆ ನೀರುನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರು ನಿಲ್ಲುವ ಸಹರಾ ಶಾಲೆಯ ಆವರಣಗೋಡೆಯ ಒಳಭಾಗಕ್ಕೆ ಮರಳು ಹಾಕಿ ಕೊಡುವುದಾಗಿ ತಿಳಿಸಿದ್ದಾರೆ ಮತ್ತೆ ಪೂರ್ಣಪ್ರಮಾಣದಲ್ಲಿ ನೀರು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದ್ದು ಮುಂದೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!