ಕಿನ್ನಿಗೋಳಿ: ಕಂಬಳದಲ್ಲಿ ಹಲವಾರು ಮೆಡಲ್ ಗೆದ್ದಿದ್ದ “ಲಕ್ಕಿ ಕೋಣ” ಸಾವು

ಕಿನ್ನಿಗೋಳಿ: ಕಂಬಳ ಕ್ಷೇತ್ರದ ಸಾಧಕ, ಹಲವಾರು ಮೆಡಲ್ ಗಳನ್ನು ತನ್ನದಾಗಿಸಿದ ಕೋಣ ಲಕ್ಕಿ ಸಾವನ್ನಪ್ಪಿದೆ.
ಐಕಳ ದಿವಾಕರ ಚೌಟ ಮಾಲಕತ್ವದ ಕೋಣ ಲಕ್ಕಿ ಕಳೆದ ಏಳೆಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ(ಜು.16) ಕಾರ್ಕಳದಲ್ಲಿ ಲಕ್ಕಿಗೆ ಅಪರೇಷನ್ ಕೂಡ ನಡೆದಿತ್ತು.
ಖ್ಯಾತ ವೈದ್ಯ ವಾಸುದೇವ ಪೈ ಅಪರೇಷನ್ ನಡೆಸಿದ್ದು, ಮತ್ತೆ ಇಂದು ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ವೈದ್ಯರನ್ನು ನೋಡಿದ ಲಕ್ಕಿ ಹೆದರಿ ಅತ್ತಿಂದಿತ್ತ ಓಡತೊಡಗಿತ್ತು.
ಲಕ್ಕಿಯ ಮಾಲಕರು ಮತ್ತು ಒಡನಾಡಿಗಳಿಗೂ ನಿಯಂತ್ರಣಕ್ಕೆ ಸಿಗದಾಯಿತು. ಕೊನೆಗೆ ಮರಕ್ಕೆ ಕಟ್ಟಿ ಹಾಕಿದ್ದು ಸ್ವಲ್ಪ ಹೊತ್ತಿನಲ್ಲೇ ಅಸು ನೀಗಿದೆ. ಲಕ್ಕಿ ಒಬ್ಬಂಟಿ ಕೋಣವಾಗಿದ್ದು ಕಂಬಳ ಸಂದರ್ಭ ಅದಕ್ಕೆ ಸರಿಯಾದ ಜೊತೆ ಹುಡುಕಿ ಕಂಬಳದಲ್ಲಿ ಓಡಿಸಲಾಗುತ್ತಿತ್ತು. ಈ ಬಾರಿ 5 ಮತ್ತು ಕಳೆದ ವರ್ಷ 5 ಮೆಡಲ್ ಗಳನ್ನು ತನ್ನದಾಗಿಸಿದ್ದ ಲಕ್ಕಿ ಹಲವಾರು ಮೆಡಲ್ ಗಳನ್ನು ಪಡೆದುಕೊಂಡಿತ್ತು.