ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ
ಬೆಂಗಳೂರು: ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹೆಂಡತಿಯ ಮೇಕಪ್ ಆಸೆ ಹಾಗೂ ಅತಿಯಾದ ಪೋನ್ ಬಳಕೆಯಿಂದ ಗಂಡ ಬೇಸತ್ತು ಹೋಗಿದ್ದ ಸಾಕಷ್ಟು ಬುದ್ದಿ ಮಾತು ಹೇಳಿದ್ದ ಆತ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದಲ್ಲಿ ಘಟನೆ ನಡೆದಿದ್ದು. ಲಾರಿ ಚಾಲಕ ಗುಲ್ಜಾರ್ ಹುಸೈನ್ ಚೌಧರಿ ಮೃತ ವ್ಯಕ್ತಿ.
ಅಸ್ಸಾಂ ಮೂಲದ ಈತ ಲಾರಿ ಚಾಲಕ ಮದುವೆ ನಂತರ ತೊಣಚಿನಕುಪ್ಪೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಗಂಡ ಹೆಂಡತಿ ನಡುವೆ ಸಾಕಷ್ಟು ಬಾರಿ ಗಲಾಟೆ ಮನನೊಂದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





