ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ಸ್ಕಾಲರ್ ಶಿಪ್ ವಿತರಣೆ
ಬೆಳ್ತಂಗಡಿ: ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ಘಟಕ (ರಿ) ಇದರ ವತಿಯಿಂದ ಸ್ಕಾಲರ್ ಶಿಪ್ ವಿತರಣಾ ಕಾರ್ಯಕ್ರಮವು ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.
ಕಂದಾಯ ಇಲಾಖೆಯ ಮುಖ್ಯ ಆಯುಕ್ತ ಶೇಖ್ ಲತೀಫ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಗಣಿತ ಶಿಕ್ಷಕ ಯಾಕೂಬ್ ಮಾಸ್ಟರ್ ಕೊಯ್ಯುರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಳೆದಬಾರಿ ಎಸ್ಎಸ್ ಎಲ್ ಸಿ ಯಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳಾದ ಮೊಹಮ್ಮದ್ ಸಫ್ವಾನ್ ಹಾಗೂ ನಿಶಾ ಎಂ. ಎ. ಇವರನ್ನು ಸ್ಮರಣಿಕೆ ಹಾಗೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ಘಟಕಾಧ್ಯಕ್ಷ ಹಾಜೀ ಅಬ್ದುಲ್ ಲತೀಫ್ ಸಾಹೇಬ್ ರವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣ ಸಂಯೋಜಕ ಸುಭಾಷ್ ಜಾದವ್ ಹಾಗೂ ಜಮೀಯ್ಯತುಲ್ ಫಲಾಹ್ ದ. ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಶಬೀಹ್ ಅಹ್ಮದ್ ಖಾಝಿ, ಕೋಶಾಧಿಕಾರಿ ಕೆ. ಎಸ್. ಅಬ್ದುಲ್ಲ ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಕಾಲೇಜ್ ನಲ್ಲಿ ಕಲಿಯುತ್ತಿರುವ 56 ಮುಸ್ಲಿಂ ಅರ್ಹ ವಿದ್ಯಾರ್ಥಿಗಳಿಗೆ ಒಂದು ಲಕ್ಷದ ಹದಿನೈದು ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿ ವೇತನ ನೀಡಲಾಯಿತು. ಪ್ರಧಾನ ಕಾರ್ಯದರ್ಶಿ ಹೈದರ್ ನೀರ್ಸಾಲ್ ಪ್ರಸ್ತಾವನೆಗೈದು ಸ್ವಾಗತಿಸಿದರು, ಕೆ. ಎಸ್. ಅಬೂಬಕ್ಕರ್ ವಂದಿಸಿದರು.








