December 20, 2025

ಶ್ರದ್ದಾ ಕೇಂದ್ರಗಳ, ಗೋ ಮಾತೆಯ ರಕ್ಷಣೆಗೆ ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ಮಾಡೋಣ: ಪೇಜಾವರ ಶ್ರೀ

0
IMG-20211212-WA0063.jpg

ಉಡುಪಿ: ಕಾರ್ಕಳ ವಿಶ್ವ ಹಿಂದೂ ಪರಿಷದ್ ಭಜರಂಗದಳ ಉಡುಪಿ ಇದರ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಕಾರ್ಕಳ ದ ಗಾಂಧಿ ಮೈದಾನದ ಅಮರ ಸೇನಾನಿ ಜನರಲ್ ಬಿಪಿನ್ ರಾವತ್ ವೇದಿಕೆ ಯಲ್ಲಿ ನಡೆಯಿತು.

ಗೌರಿ ಗದ್ದೆ ದತ್ತಾಶ್ರಮದ ವಿನಯ ಗುರೂಜಿ ಮಾತನಾಡಿ ದೇಹವನ್ನು ಶಿಲೆಯಾಗಿ ನಾಮಧೇಯ ವಾಗಿ, ಧರ್ಮದ ವಿರುದ್ದ ಮಾತನಾಡುವುದು ಧರ್ಮಯುದ್ದವಾದೃ ಕೇಸರಿ ಸನಾತನ ಧರ್ಮ ಹೊಂದಿರುವ ಸಂಕೇತ. ಸೃಷ್ಟಿ ಸರಿದೂಗಲು ಹಿಂದೂ ಧರ್ಮ ಉಳಿಯಲು, ಧರ್ಮ ಪ್ರಜ್ಞೆ ನಿಡುವ ಪ್ರವೃತ್ತಿ ಬಾಲ್ಯದಲ್ಲೇ ಅಗಬೇಕು. ನಾಮ ಭಜನೆ, ರಾಮ ಭಜನೆಯಾಗಲಿ, ಕಲಿ ಕಲ್ಮಶ ತೊಳೆಯುವ ಕಾರ್ಕಳ ವಾಗಲಿ, ನಮ್ಮೂರೆ ನಮಗೆ ತೀರ್ಥ ಕ್ಷೇತ್ರ ವಾಗಬೇಕು. ಅಗಲೆ ಧರ್ಮದ ಉಳಿಸಲು ಸಾಧ್ಯ ಎಂದರು
ಗೋಮಾತೆ ವಿರುದ್ಧ ಹೋರಾಡುವ ಭಜರಂಗದಳದ ಭಕ್ತರ ಮೇಲಿನ ಕೇಸನ್ನು ರದ್ದುಗೊಳಿಸಲು ಸಹಿಸಂಗ್ರಹ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದೇನೆ, ದತ್ತ ನಿಧಿಗೆ 50000 ನಿಧಿಯನ್ನು ಪ್ರಕಟಿಸಿದರು.

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ದೇಶದ ಸಂಸ್ಕೃತಿ ಯನ್ನು ರಕ್ಷಿಸುತ್ತಿರುವ ಸಂಘ ಕಾರ್ಯಕರ್ತರ ಅನನ್ಯ ಸೇವೆಯಿಂದ ತಲೆ ಎತ್ತಿ ಬಾಳುತಿದ್ದೆವೆ. ಶ್ರದ್ದಾ ಕೇಂದ್ರ ಗಳ ರಕ್ಷಣೆಗೆ ಗೋ ಮಾತೆಯ ರಕ್ಷಣೆಗೆ ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ಮಾಡೋಣ. ಕಾನೂನನ್ನು ಕೈಗೆತ್ತಿಕೊಳ್ಳಬೆಡಿ ಎಂದರು ಕಿವಿ‌ಮಾತು ಹೇಳಿದರು.

ಮನೆಯಲ್ಲಿರುವ ಮಕ್ಕಳಿಗೆ ಉತ್ತಮ ಸಂಸ್ಕೃತಿ ಶಿಕ್ಷಣ ನೀಡೊಣ, ಸ್ಪೂರ್ತಿ ತುಂಬುವ ನಮ್ಮ ಸಂಸ್ಕೃತಿಯ ಗೌರವಿಸುವ ಸರಕಾರವನ್ನು ನಾವು ಚುನಾಯಿಸಬೇಕು ಎಂದರು.

ಸಾದ್ವಿ ಸರಸ್ವತಿ ದಿಕ್ಸೂಚಿ ಭಾಷಣ ಮಾಡಿ ಕರ್ನಾಟಕ ದಲ್ಲಿ ಹಿಂದು ಕಾರ್ಯಕರ್ತರ ತ್ಯಾಗವಿದೆಯೋ ಅಲ್ಲಿಯವರೆಗು ನಶಿಸಿ ಹೋಗದು. ಟಿಪ್ಪು ಸುಲ್ತಾನ್ ಪೂಜಿಸುವ ಮನಸ್ಸುಗಳಿಗೆ ಧಿಕ್ಕರಿಸಿ.
ಅಯೊದ್ಯದಲ್ಲಿ ರಾಮಮಂದಿರ ನಿರ್ಮಾಣ ವಾಗಿದೆ, ರಾಜ್ಯದಲ್ಲಿ ಪ್ರಖರತೆಯ ಮತಾಂತರ, ಲವ್ ಜಿಹಾದ್, ಗೋರಕ್ಷಣಾ ಜಾರಿಗೆ ತನ್ನಿ ಎಂದು ಸರಕಾರ ವನ್ನು ಒತ್ತಾಯಿಸಿದರು.
ಗೋರಕ್ಷಣೆಗಾಗಿ ಮನೆಯಲ್ಲಿ ಖಡ್ಗವನ್ನು ಇಟ್ಟು ಗೊಮಾತೆಯನ್ನು ರಕ್ಷಿಸಿ, ಗೊಮಾತೆಯನ್ನು ಪೂಜಿಸಿ. ಭಾರತೀಯ
ಮಕ್ಕಳಿಗೆ ಭಗವದ್ಗೀತೆ ಬೋದಿಸಬೆಕು, ಸಂಸ್ಕೃತಿಯ ಪಾಠವೆ ಮೊದಲಾಗಬೇಕು ಎಂದರು.

ಆನೆಗೊಂದಿ ಮಠದ ಕಾಳಹಸ್ತೆಂದ್ರ ಸ್ವಾಮೀಜಿ ಮಾತನಾಡಿ ದೇಶದಲ್ಲಿ ಸಂತರು ಶಾಂತಿಯನ್ನು ಹಂಚಿದವರು, ಆದರೆ ದೇಶದೊಳಗಿನ ದುಷ್ಟ ಶಕ್ತಿಗಳೆ, ಮತಾಂತರ ಭಯೋತ್ಪಾದನೆ ಹಿಮ್ಮೆಟ್ಟಿಸಬೇಕು. ಧರ್ಮಾಧರಿತ ಕಾನೂನು, ಸಮಾನ ಕಾನೂನು ಸಂಹಿತೆ ಜಾರಿಗೆ ತರಬೇಕು ಎಂದರು.

ಕರ್ನಾಟಕ ವಿಶ್ವ ಹಿಂದೂ ಪರಿಷತ್ ನ ಎಂ.ಬಿ ಪುರಾಣಿಕ್
ಬೋಳ ಶ್ರಿನಿವಾಸ ಕಾಮತ್, ಕಡ್ತಲ ವಿಶ್ವ ನಾಥ ಪೂಜಾರಿ , ಸುವೃತ್ ಕುಮಾರ್, ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಹಿರ್ಗಾನದ ಮೊಕ್ತೇಸರ ಅಶೋಕ್ ನಾಯಕ್ ಹಿರ್ಗಾನ, ಮಹೇಶ್ ಶೆಟ್ಟಿ ಕುಡುಪುಲಾಜೆ, ಶರತ್ ಹೆಗ್ಡೆ ಬೆಲ್ಮಣ್ಣು, ಸುಂದರ್ ಬಿ ಹೊಸ್ಮಾರು, ಸುನೀಲ್ ಕೆ.ಆರ್, ಭುಜಂಗ ಕುಲಾಲ್, ಸುರೇಖ ರಾಜ್, ವಿಷ್ಣುಮೂರ್ತಿ ಆಚಾರ್ಯ, ಸುರೇಂದ್ರ ಕೋಟೇಶ್ವರ, ಉಪಸ್ಥಿತರಿದ್ದರು. ಚೇತನ್ ಪೆರಲ್ಕೆ ಸ್ವಾಗತಿಸಿದರು.

ಮನಸೆಳೆದ ವೈಭವದ ಶೋಭಯಾತ್ರೆ:
ಕೇಸರಿ ಮಯಗೊಂಡಿದ್ದ ಕಾರ್ಕಳ ಪೇಟೆಯ ಮುಖ್ಯ ರಸ್ತೆಗಳು ಯುವಕರು ಕೆಸರಿ ಶಾಲು ದ್ವಜ ಹಿಡಿದು ಮಹಿಳೆಯರು ಕೇಸರಿ ಪೇಟ ತೊಟ್ಟು ಮೆರವಣಿಗೆ ಯಲ್ಲಿ ಸಾಗಿದರು. ಕಾರ್ಕಳ ಸ್ವರಾಜ್ಯ ಮೈದಾನದಿಂದ ಗಾಂಧಿ ಮೈದಾನದ ವರೆಗೆ ವೈಭವದ ಶೊಭಯಾತ್ರೆ ಯಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಬಿಪಿನ್ ರಾವತ್ ಹಾಗೂ ವೀರ ಸೆನಾನಿಗಳಿಗೆ ಶ್ರದ್ದಾಂಜಲಿ ಸಲ್ಲಿಸುವ ಸ್ಸ್ತಬ್ಧ ಚಿತ್ರ, ದ್ಯಾನ ನಿರತ ಶಿವ, ಹನುಮಂತ ಮುರ್ತಿ, ದತ್ತ ಮುರ್ತಿ, ಹೆಬ್ರಿ ಕಾರ್ಕಳ ತಾಲೂಕಿನ ಐವತ್ತಕ್ಕೂ ಹೆಚ್ಚು ಭಜನಾ ತಂಡಗಳು, ನಾಸಿಕ್ ಬ್ಯಾಂಡ್ ಗಳು ಶೋಭಯಾತ್ರೆಯುದ್ದಕ್ಕೂ ಮೂರು ಕಿ. ಉದ್ದಕ್ಕೂ ಮೆರವಣಿಗೆ ಸಾಗಿದವು.

ಸೂರ್ಯ ಪುರೋಹಿತ್ ಹನುಮಂತ ಚಿತ್ರಬಿಡಿಸಿದರು. ಜಗದೀಶ್ ಪುತ್ತೂರು ಸಂಗೀತ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

You may have missed

error: Content is protected !!