ಸುಳ್ಯ: ಹೋರಿ ತಿವಿದು ವ್ಯಕ್ತಿ ಮೃತ್ಯು
ಸುಳ್ಯ: ತಮ್ಮದೇ ಮನೆಯ ಹೋರಿ ತಿವಿದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇಂದು ಸುಳ್ಯದ ಮುರುಳ್ಯ ಗ್ರಾಮದಿಂದ ವರದಿಯಾಗಿದೆ.

ಕಿಟ್ಟಣ್ಣ ಗೌಡ ಕೋಡಿಯಡ್ಕ ಎಂಬವರು ಹೋರಿ ತಿವಿದು ಮೃತರಾದ ವ್ಯಕ್ತಿ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಹೋರಿಯನ್ನು ತೋಟದಲ್ಲಿ ಮೇಯಲು ಕಟ್ಟಿದ್ದು ಸಂಜೆ ವೇಳೆ ಹೋರಿಯನ್ನು ಕರೆತರಳು ತೆರಳಿದ್ದರೆನ್ನಲಾಗಿದೆ. ಅಲ್ಲಿ ಹೋರಿ ತಿವಿದು ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಡಿ.12 ರ ಬೆಳಗ್ಗೆ ಆ ದಾರಿಯಲ್ಲಿ ಬಂದ ವ್ಯಕ್ತಿಯೋರ್ವರಿಗೆ ಕಿಟ್ಟಣ್ಣ ಗೌಡರು ಬಿದ್ದುಕೊಡಿರುವುದು ಪತ್ತೆಯಾಗಿದ್ದು ಅಲ್ಲೇ ಪಕ್ಕ ಹೋರಿ ಕಟ್ಟಿ ಹಾಕಿರುವುದನ್ನು ನೋಡಿದ್ದು ಹತ್ತಿರ ಹೋಗಿ ನೋಡುವಾಗ ಅವರು ಮೃತರಾಗಿರುವುದು ಗೊತ್ತಾಗಿದೆ. ಬಳಿಕ ಮನೆಯವರಿಗೆ ವಿಷಯ ತಿಳಿಸಲಾಗಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ. ಮೃತ ಶರೀರವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಪೋಸ್ಟ್ ಮಾರ್ಟಂ ನಡೆಸಲಾಗಿದೆ.





