ಉಡುಪಿ: ಕಾಪು ಪುರಸಭಾ ಚುನಾವಣೆ: ಎಸ್ ಡಿ ಪಿ ಐ ಅಭ್ಯರ್ಥಿಗಳ ಘೋಷಣೆ
ಉಡುಪಿ: ಜಿಲ್ಲೆಯ ಕಾಪು ಪುರಸಭಾ ಚುನಾವಣೆ ಡಿಸೆಂಬರ್ ತಿಂಗಳ ಕೊನೆಗೆ ನಡೆಯಲಿರುವುದರಿಂದ ಎಸ್ಡಿಪಿಐ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿದೆ.
ಕಾಪು ಕೊಂಬಗುಡ್ಡೆಯಲ್ಲಿ ನಡೆದ ಪಕ್ಷದ ಕಾರ್ಯಕರ ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಅಧಿಕೃತ ಅಭ್ಯರ್ಥಿಗಳ ಪ್ರಥಮ ಪಟ್ಟಿಯ ಹೆಸರನ್ನು ಘೋಷಿಸಿದರು.
ಅಭ್ಯರ್ಥಿ ಘೋಷಣೆ ಮಾಡಿ ಮಾತಾಡಿದ ಶಾಫಿ ಬೆಳ್ಳಾರೆಯವರು ಓಟು ಪಡೆಯುವಾಗ ಕಾಂಗ್ರೆಸ್ ಮತ್ತೆ ಬಿಜೆಪಿಗೆ ಸೇರ್ಪಡೆಗೊಳ್ಳುವ ಈ ಸಂದರ್ಭದಲ್ಲಿ ಜನತೆ ಪ್ರಜ್ಙಾವಂತಿಕೆಯಿಂದ ಮತ ಚಲಾಯಿಸಲು ಮತ್ತು ಈ ದೇಶದ ಅಲ್ಪಸಂಖ್ಯಾತ,ದಲಿತ ಸಮುದಾಯದಕ್ಕೆ ಕಾಂಗ್ರೆಸ್ ನಡೆಸಿದ ಅನ್ಯಾಯಗಳನ್ನು ಮರೆಯಬಾರದು ಎಂದು ತಿಳಿಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಮಾತನಾಡಿ ಅಲ್ಪಸಂಖ್ಯಾತರು ಚುನಾವಣೆಗೆ ನಿಂತರೆ ಯಾರೂ ಮತ ಹಾಕುವುದಿಲ್ಲ ಎಂಬ ಕಾಂಗ್ರೆಸ್ ನಾಯಕರೋರ್ವರ ಮಾತನ್ನು ಪ್ರಸ್ತಾಪಿಸಿ ಅದೇ ಅಲ್ಪಸಂಖ್ಯಾತರ ಮತಗಳು ನೀವುಗಳು ಗೆಲ್ಲಲು ಬೇಕಾ ಎಂದು ಪ್ರಶ್ನಿಸಿದರು.
ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲೀ ರವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರದ ಅಧ್ಯಕ್ಷತೆಯನ್ನು ಕಾಪು ವಿಧಾನ ಸಭಾ ಅಧ್ಯಕ್ಷ ಹನೀಫ್ ಮೂಳೂರ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್,ಫಹೀಮ್, ಇಬ್ರಾಹಿಂ ಉಚ್ಚಿಲ ಉಪಸ್ಥಿತರಿದ್ದರು.
ಬಿಡುಗಡೆಗೊಳಿಸಿದ ಪ್ರಥಮ ಪಟ್ಟಿ ಅಭ್ಯರ್ಥಿಗಳ ವಿವರ:
1)ದುಗನ್ ತೋಟ-ಹನೀಫ್ ಮೂಳೂರು
2) ಮಂಗಳಪೇಟೆ-ವಹೀದಾ ಷರೀಪ್
3) ಬಡಗರಗುತ್ತು-ನಿಯಾನ್ ಪರ್ವೀನ್
4) ಕೊಂಬಗುಡ್ಡೆ-ನಝೀರ್ ಅಹ್ಮದ್
5) ಗುಜ್ಜಿ-ಸರಿತ ಶಿವ
6) ಜನರಲ್ ಶಾಲೆ-ರುಬೀನ ಶಹಬಾನ್
7) ಗರಡಿ- ಅಬ್ದುಲ್ ಖಾದರ್
8) ಕುಡ್ತಿಮಾರ್-ನಝ್ನೀನ್ ಇರ್ಫಾನ್





