ಕೆಂಡ ಹಾಯುವಾಗ ಕೊಂಡಕ್ಕೆ ಬಿದ್ದು ವ್ಯಕ್ತಿ
ರಾಯಚೂರು: ಕೆಂಡ ಹಾಯುವಾಗ ವ್ಯಕ್ತಿಯೊಬ್ಬ ಆಯಾತಪ್ಪಿ ಕೊಂಡಕ್ಕೆ ಬಿದ್ದು ದಾರುಣ ಅಂತ್ಯ ಕಂಡ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರಿನ ಮಸ್ಕಿ ತಾಲೂಕಿನ ಬೊಮ್ಮನಾಳ ಗ್ರಾಮದದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಹೊಕ್ರಾಣಿ ಗ್ರಾಮದ ನಿವಾಸಿ ಯಮನಪ್ಪ ನಾಯಕ್ (45) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಇಲ್ಲಿ ಮುಸ್ಲಿಮರ ಪವಿತ್ರ ಹಬ್ಬ ಮೊಹರಂ ನ್ನು ಎಲ್ಲಾ ವರ್ಗದ ಜನ ಆಚರಿಸುತ್ತಾರೆ. ಮೊಹರಂ ಆಚರಣೆ ವೇಳೆ ದೇವರು ಹೊತ್ತವರು ಅಗ್ನಿ ಹಾಯುವ ಸಂಪ್ರದಾಯವಿದ್ದು ದೇವರಲ್ಲಿ ಬೇಡಿಕೆ ಈಡೇರಿಕೆಗಾಗಿ ಕೆಲವರು ಬೆಂಕಿ ಹಾಯುತ್ತಾರೆ. ಹೀಗೆ ಬೆಂಕಿ ಹಾಯುವ ಸಮಯದಲ್ಲಿ ಕೊಂಡಕ್ಕೆ ಆಯಾ ತಪ್ಪಿ ಬಿದ್ದ ವ್ಯಕ್ತಿಯೊಬ್ಬರು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದಾರೆ.