February 4, 2026

ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಅನುಮಾನಾಸ್ಪದವಾಗಿ ಸಾವು

0
image_editor_output_image-1306228208-1720991362252.jpg

ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ 10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪಿರುವ ಘಟನೆ ವಿಜಯನಗರ ಜಿಲ್ಲೆ ಹಡಗಲಿ ತಾಲೂಕಿನ ದುಂಗಾವತಿ ತಾಂಡಾದಲ್ಲಿ ಬೆಳಕಿಗೆ ಬಂದಿದೆ.

ಅನಸೂಯಾ (10) ಮೃತ ಬಾಲಕಿ. ತಂದೆ ರವಿ ಹಾಗೂ ತಾಯಿ ಲಕ್ಷ್ಮಿ ದಂಪತಿಗೆ ಅನಸೂಯಾ ಒಬ್ಬಳೇ ಮಗಳು.

ಬಾಲಕಿಯ ಮೃತ ದೇಹ ಕಂಡು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೊಂಡದ ಪಕ್ಕದಲ್ಲಿ ಮೃತ ದೇಹ, ಮತ್ತೊಂದು ಕಡೆ ನೀರಿನ ತಂಬಿಗೆ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಪೋಷಕರು ಕೊಲೆ ಆರೋಪ ಮಾಡಿದ್ದಾರೆ. ನನ್ನ ಮಗಳ ಕೊಲೆಯಾಗಿದೆ, ನಮಗೆ ನ್ಯಾಯಾ ಸಿಗಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!