February 4, 2026

ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿ ಅನುಮಾನಸ್ಪದವಾಗಿ ಸಾವು

0
image_editor_output_image-40041956-1720855780296.jpg

ಬೆಳಗಾವಿ: ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ, ಯುವಕನ ಜೊತೆ ಲವ್ ನಲ್ಲಿ ಬಿದ್ದು ಮದುವೆಯಾಗಿದ್ದ ಮೈಸೂರು ಮೂಲದ ಯುವತಿ ಇದೀಗ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೈಸೂರಿನ ಕುಂಬಾರಕೊಪ್ಪಲು ನಿವಾಸಿ 23 ವರ್ಷದ ಮಂಜುಳ ಅಲಿಯಾಸ್ ನಯನ ಮೃತಪಟ್ಟ ಯುವತಿ. ಈಕೆಗೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ಹುಚ್ಚಿತ್ತು.

ಈ ನಡುವೆ ಇನ್ಸ್ಟಾಗ್ರಾಮ್ ನಲ್ಲಿ ಬೆಳಗಾವಿ ಜಿಲ್ಲೆ ಮಚ್ಚೆ ಗ್ರಾಮದ ಬೀರೇಶ್ ಎಂಬುವವನ ಪರಿಚಯವಾಗಿ ಪ್ರೇಮಾಂಕುರವಾಗಿದೆ. ಈ ಹಿನ್ನೆಲೆಯಲ್ಲಿ ಮಂಜುಳ ಬೆಳಗಾವಿಗೆ ತೆರಳಿ ಒಂದು ವರ್ಷದ ಹಿಂದೆ ಬೀರೇಶ್ ನನ್ನು ವಿವಾಹವಾಗಿದ್ದಳು.

ಮೈಸೂರಿನಿಂದ ಬೆಳಗಾವಿಗೆ ಆಗಮಿಸಿದ್ದ ಮಂಜುಳಾಳನ್ನ ಪುಸಲಾಯಿಸಿ ಬೀರೇಶ್ ಮದುವೆಯಾಗಿದ್ದ. ಈ ಮಧ್ಯೆ ಮಂಜುಳ 3 ತಿಂಗಳ ಗರ್ಭಿಣಿಯಾಗಿದ್ದು, ಇದೀಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ.

Leave a Reply

Your email address will not be published. Required fields are marked *

error: Content is protected !!