May 5, 2026

ಮಂಗಳೂರಿಗೆ ಸರಕುಗಳನ್ನು ಹೊತ್ತೊಯ್ಯುತ್ತಿದ್ದ ಕಂಟೈನರ್‌ ಲಾರಿ ಪಲ್ಟಿ

0
image_editor_output_image1475347826-1720387881563.jpg

ಯಲ್ಲಾಪುರ: ಕಂಟೈನರ್‌ ಲಾರಿಯೊಂದು ತಾಲೂಕಿನ ರಾ.ಹೆದ್ದಾರಿ 63 ಅರಬೈಲ್ ಘಟ್ಟದಲ್ಲಿ ತಗ್ಗಿಗಿಳಿದ ಘಟನೆ ಜು. 7ರ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ರಾಜಸ್ಥಾನದಿಂದ ಮಂಗಳೂರಿಗೆ ಸರಕುಗಳನ್ನು ಹೊತ್ತೊಯ್ಯುತ್ತಿದ್ದ ಕಂಟೈನರ್‌ ನಿಯಂತ್ರಣ ತಪ್ಪಿ ತಗ್ಗಿಗೆ ಹೋಗಿದೆ. ಆದರೆ ಪಲ್ಟಿಯಾಗದೇ ಮುಂದಾಗುವ ಅನಾಹುತ ತಪ್ಪಿದೆ. ಚಾಲಕ, ಕ್ಲೀನರ್ ಇಬ್ಬರಿಗೂ ಯಾವುದೇ ತೊಂದರೆಯಾಗಿಲ್ಲ.

ಕ್ರೇನ್ ತಂದು‌ ಕೂಡಲೇ ಲಾರಿಯನ್ನು ‌ಮೇಲಕ್ಕೆತ್ತಲಾಯಿತು. ಹೆದ್ದಾರಿ ಇಲಾಖೆಯ ಮುರುಗೇಶ ಶೆಟ್ಟಿ ಅರಬೈಲ್ ಈ ಸಂದರ್ಭದಲ್ಲಿ ಸಂಬಂದಿಸಿದವರಿಗೆ ವಿಷಯ ತಿಳಿಸಿ ನೆರವಾದರು.

Leave a Reply

Your email address will not be published. Required fields are marked *

error: Content is protected !!