May 6, 2026

ಅರ್ಧ ಕೆಜಿ ಚಿನ್ನ, 50 ಲಕ್ಷ ರೂ. ಹಣ ಕೊಟ್ಟರೂ ವರದಕ್ಷಿಣೆಗಾಗಿ ಕಿರುಕುಳ: ಮಹಿಳೆಯ ಹತ್ಯೆ

0
image_editor_output_image-273690934-1719899433604.jpg

ಹಾಸನ: ಅರ್ಧ ಕೆಜಿ ಚಿನ್ನ, 50 ಲಕ್ಷ ರೂ. ಹಣ ಕೊಟ್ಟರೂ ವರದಕ್ಷಿಣೆಗಾಗಿ ಮಗಳನ್ನು ಲೋಕನಾಥ್ ಪೀಡಿಸಿ ಹತ್ಯೆ ಮಾಡಿದ್ದಾನೆ ಎಂದು ಮಮತಾ ಪೋಷಕರು ಆರೋಪಿಸಿದ್ದಾರೆ.

ಹಾಸನ ಹೊರವಲಯದ ಚನ್ನಪಟ್ಟಣ ಬಡಾವಣೆಯ ಮಮತಾ ಹಾಗೂ ಕೆ.ಆರ್.ಪುರಂನ ಲೋಕನಾಥ್ 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಲೋಕನಾಥ್‍ಗೆ ಅರ್ಧ ಕೆಜಿ ಚಿನ್ನ, 50 ಲಕ್ಷ ರೂ. ಹಣ ಹಾಗೂ ಜಾಗವನ್ನು ನೀಡಲಾಗಿತ್ತು.

ಆದರೂ ಆತ ಮಮತಾಗೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ದೂರು ನೀಡುವಂತೆ ಹೇಳಿದ್ದರೂ ಸಹ ಮಮತಾ ಮರ್ಯಾದೆಗೆ ಅಂಜಿ ಸುಮ್ಮನಿದ್ದರು. ಇಂದು (ಜು.1) ದೂರು ನೀಡಲು ಎಸ್‍ಪಿ ಕಚೇರಿ ಬಳಿ ಬಂದಿದ್ದಾಗ ಚಾಕು ಇರಿದಿದ್ದಾನೆ ಎಂದು ಪೋಷಕರು ಆಸ್ಪತ್ರೆ ಬಳಿ ಕಣ್ಣೀರಿಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!