March 17, 2026

ಉಪ್ಪಿನಂಗಡಿ|ಟೂ‌ರ್ ಏಜನ್ಸಿಯಿಂದ ವಂಚನೆ: ಪೊಲೀಸ್‌ ಠಾಣೆಗೆ ದೂರು

0
image_editor_output_image-519603957-1719818910844.jpg

ಉಪ್ಪಿನಂಗಡಿ: ಇಲ್ಲಿನ ಫಾರೂಕ್ ಎಂಬವರಿಗೆ ಸೇರಿದ ಜಲಾಲಿಯ್ಯ ಅಜೀ‌ರ್ ಝಿಯಾರತ್ ಟೂರ್ ಏಜೆನ್ಸಿ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದ್ದು, ಟೂ‌ರ್ ಏಜನ್ಸಿ ಅಜೀರ್‌ ಯಾತ್ರೆಗೆ ಕರೆದುಕೊಂಡು ಹೋಗಿ ವಂಚಿಸಿರುವುದಾಗಿ ಯಾತ್ರಾರ್ಥಿ ಕುಟುಂಬವೊಂದರ ಸದಸ್ಯ ಅಬ್ದುಲ್ ರಝಾಕ್ ಬೆಂಗಳೂರಿನ ಪದ್ಮನಾಭನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಮೂಲದ ಫಾರೂಕ್ ಗೆ ಸೇರಿದ ಈ ಟೂ‌ರ್ ಏಜೆನ್ಸಿ ಮೂಲಕ ಆತೂರು ಮೂಲದ ಕುಟುಂಬದ ಒಟ್ಟು 60 ಯಾತ್ರಿಕರಿದ್ದ ತಂಡ ಬೆಂಗಳೂರಿನಿಂದ ಅಜೀರ್ ಗೆ ತೆರಳಿತ್ತು. ಅಜೀರ್‌ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಕುಟುಂಬ ಸದಸ್ಯರಲ್ಲಿ ಟೂ‌ರ್ ಏಜೆನ್ಸಿ ಸಿಬ್ಬಂದಿ ಹೆಚ್ಚುವರಿ ಹಣ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.

ನಾವು ಕೊಡಲ್ಲ. ಯಾಕೆ ಹೆಚ್ಚುವರಿಯಾಗಿ ಹಣ ಕೊಡಬೇಕು ಎಂದು ಪ್ರಶ್ನಿಸಿದಾಗ ಯಾತ್ರಿಕರಿಗೆ ಟೂರ್ ಏಜೆನ್ಸಿ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಯಾತ್ರಿಕರನನ್ನು ಅಜ್ಜರ್‌ ನಲ್ಲಿಯೇ ಬಿಟ್ಟು ಬರುವುದಾಗಿ ಹೇಳಿದ್ದಾರೆ. ಆ ರೀತಿ ಮಾಡಿದರೆ ಪೊಲೀಸ್ ದೂರು ನೀಡುವುದಾಗಿ ಅಬ್ದುಲ್ ರಝಾಕ್ ಹೇಳಿದ್ದು,ಅವರಿಗೆ ಫಾರೂಕ್ ಜೀವ ಬೆದರಿಕೆ ಒಡ್ಡಿದ್ದಾರೆ. ಯಾತ್ರಿಕರ ಕುಟುಂಬದ ಸದಸ್ಯ ಅಬ್ದುಲ್ ರಝಾಕ್ ಬೆಂಗಳೂರಿನ ಪದ್ಮನಾಭನಗರ ಪೊಲೀಸ್‌ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!