March 20, 2026

ಮುಸ್ಲಿಂ ಬಾಲಕಿಯ ಕಿಡ್ನಾಪ್: ಶಂಕರ್ ವಿರುದ್ಧ FIR ದಾಖಲು

0
image_editor_output_image1069684907-1719812047291.jpg

ಬೆಂಗಳೂರು: ಮುಸ್ಲಿಂ ಬಾಲಕಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಪ್ರಾಪ್ತ ವಯಸ್ಸಿನ ಹುಡುಗಿಯ ಪೋಷಕರು ದೂರು ನೀಡಿದ್ದಾರೆ. ಹುಡುಗಿ ಮುಸ್ಲಿಮಳಾಗಿದ್ದು, ಆಕೆಯ ಜೊತೆಗೆ ತೆರಳಿರುವ ಹುಡುಗ ಹಿಂದೂ ಧರ್ಮದವನಾಗಿದ್ದಾನೆ.

ರಜಿಯಾ ಹಾಗು ಅಬ್ದುಲ್ ರಹಿಂ ಎಂಬುವವರ ಹದಿನಾರು ವರ್ಷದ ಪುತ್ರಿಯನ್ನು ಶಂಕರ್‌ ಎಂಬಾತ ಕಿಡ್ನಾಪ್ ಮಾಡಿದ್ದಾನೆ ಎಂದು ದೂರು ಸಲ್ಲಿಸಲಾಗಿದೆ.

ಕಳೆದ ಹದಿನಾಲ್ಕು ದಿನಗಳಿಂದ ಬಾಲಕಿ ಸಿಗದೆ ಪೋಷಕರು ಕಂಗಾಲಾಗಿದ್ದಾರೆ. ಪೋಷಕರು ಈಕೆಯನ್ನು ಕಾಲೇಜಿಗೆ ಬಿಟ್ಟು ಬಂದಿದ್ದರು. ನಂತರ ಕಾಲೇಜಿನಿಂದ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಂದ ಹುಡುಕಾಟ ನಡೆದಿದೆ.

ಮೊಬೈಲ್ ಕೂಡ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಹುಡುಗಿಯನ್ನು ಹುಡುಗ ಬೈಕ್‌ನಲ್ಲಿ ಕರೆದೊಯ್ದಿರುವ ಶಂಕೆ ಇದೆ. ಮೊಬೈಲ್ ಟ್ರೇಸ್ ಮಾಡಿ ಪರಿಶೀಲನೆ ನಡೆಸಿದಾಗ ಚಿಕ್ಕಬಳ್ಳಾಪುರದಲ್ಲಿ ಶಂಕರ್ ಬೈಕ್ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!