May 6, 2026

ಜನಸ್ಪಂದನಾ ಕಾರ್ಯಕ್ರಮ ಮುಗಿಸಿ ಬರುವಾಗ ಅಪಘಾತ: ಆಹಾರ ನಿರೀಕ್ಷಕ ಸಾವು

0
image_editor_output_image1699191760-1719643292189.jpg

ಚಾಮರಾಜನಗರ: ಹಂಗಳ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವೇಳೆ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಆಹಾರ ನಿರೀಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಿಂಬದಿ ಸವಾರ ಆಹಾರ ಶಿರಸ್ತೇದಾರ್ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬಸವಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ-67ರಲ್ಲಿ ಶುಕ್ರವಾರ ಸಂಜೆ ನಡೆದಿದೆ.

ತಾಲೂಕಿನ ಅಂಕಹಳ್ಳಿ ಗ್ರಾಮದ ಪಟ್ಟಣ ನಿವಾಸಿ ಆಹಾರ ನಿರೀಕ್ಷಕ ನಾಗೇಂದ್ರಪ್ಪ(46) ಮೃತರು. ಮೈಸೂರು ನಿವಾಸಿ ಆಹಾರ ಶಿರಸ್ತೇದಾರ್ ರಮೇಶ್(52) ತೀವ್ರವಾಗಿ ಗಾಯಗೊಂಡವರು.

ಇಬ್ಬರು ಬೈಕ್ ನಲ್ಲಿ ಹಂಗಳ ಗ್ರಾಮದಿಂದ ಬರುತ್ತಿದ್ದ ವೇಳೆ ಗುಂಡ್ಲುಪೇಟೆ ಕಡೆಯಿಂದ ಹೋಗುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿದೆ.

Leave a Reply

Your email address will not be published. Required fields are marked *

error: Content is protected !!