March 18, 2026

ಕಾರವಾರದಲ್ಲಿ ಮಳೆಗೆ ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆ ಸಾವು

0
image_editor_output_image1700115281-1719643056042.jpg

ಉತ್ತರ ಕನ್ನಡ: ಮಳೆಯಿಂದ ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಆರವ ಗ್ರಾಮದ ತೋರ್ಲೇ ಭಾಗದಲ್ಲಿ ನಡೆದಿದೆ.

ಹಳೇ ಅಂಗಡಿಯ ಗೋಡೆ ಕುಸಿದು ರುಕ್ಮಾ ಮಾಳ್ಸೇಕರ(70) ಕೊನೆಯುಸಿರೆಳೆದಿದ್ದಾರೆ. ಭಾರಿ ಮಳೆ ಬರುತ್ತಿದ್ದ ಹಿನ್ನೆಲೆ ಮೃತ ವೃದ್ಧೆ ಹಳೇ ಅಂಗಡಿಯ ಬಳಿ ನಿಂತಿದ್ದರು.

ಈ ವೇಳೆ ಗೋಡೆ ಕುಸಿದು ದುರ್ಘಟನೆ ನಡೆದಿದೆ. ಸ್ಥಳಕ್ಕೆ ತಹಶೀಲ್ದಾರ್ ನೊರೋನ್ಹಾ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!