March 24, 2026

ಮಂಗಳೂರು: ಬ್ಯಾಂಕ್ ನ ಎಸಿಯೊಳಗೆ ಹೆಬ್ಬಾವಿನ ಮರಿ ಪತ್ತೆ

0
image_editor_output_image-1083438532-1719552553099.jpg

ಮಂಗಳೂರು: ಮಂಗಳೂರಿನಲ್ಲಿ ಮಳೆಗೆ ಬ್ಯಾಂಕ್ ನ ಎಸಿಯೊಳಗೆ ಹೆಬ್ಬಾವಿನ ಮರಿಯೊಂದು ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ನಗರದ ಕೊಡಿಯಾಲ್ ಬೈಲ್ ಯೂನಿಯನ್ ಬ್ಯಾಂಕ್ ನ ಎ.ಸಿಯೊಳಗೆ ಹೆಬ್ಬಾವು ಮರಿ ಕಾಣ ಸಿಕ್ಕಿದ್ದು, ಉರಗ ತಜ್ಞ ಗಂಗೇಶ್ ಬೋಳಾರ್ ಅವರು ಹೆಬ್ಬಾವಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.

ಹೆಬ್ಬಾವು‌ ಮರಿ ಎ.ಸಿ.ಯ ಔಟ್ ಡೋರ್ ನ ಪೈಪ್ ಮೂಲಕ ಒಳ ಬಂದಿರುವ ಸಾಧ್ಯತೆ ಇದ್ದು, ಎ.ಸಿ.ಪ್ಯಾನಲ್‌ ಒಳಗಿದ್ದ ಹೆಬ್ಬಾವು ಮರಿಯನ್ನ ನಾಜೂಕಾಗಿ ಉರಗ ತಜ್ಞ ತೆಗೆದಿದ್ದಾರೆ. ಹೆಬ್ಬಾವಿನ ಮರಿ ಸೇರಿಕೊಂಡ ಹಿನ್ನಲೆ ಆತಂಕದಲ್ಲಿ ಬ್ಯಾಂಕ್ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

Leave a Reply

Your email address will not be published. Required fields are marked *

error: Content is protected !!