ಕೊಡಂಗಾಯಿ: ಸಿರಾಜುಲ್ ಇಸ್ಲಾಂ ಮದ್ರಸ ಎಂ ಜೆ ಎಂ ಕೊಡಂಗಾಯಿ, ಸಮಸ್ತ ಸ್ಥಾಪನಾ ದಿನಾಚರಣೆ
ಕೊಡಂಗಾಯಿ: ವಿಶ್ವ ವಿಖ್ಯಾತ ಉಲಮಾ ಸಂಘಟನೆಯಾದ “ಸಮಸ್ತ ” ದ 99ನೇ ಸ್ಥಾಪನಾ ದಿನವನ್ನು ಎಸ್,ಕೆ,ಎಸ್,ಬಿ,ವಿ ವತಿಯಿಂದ ಮುಹ್ಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಆಚರಿಸಲಾಯಿತು.
ಮಸೀದಿ ಅಧ್ಯಕ್ಷ ಅಬ್ದುಲ್ ಕುಂಞ ಮೂರ್ಜೆಬೆಟ್ಟು ಧ್ವಜಾರೋಹಣ ಮಾಡಿದರು.
ಖತೀಬ್ ಬಿ ಎ ಸಿದ್ದೀಕ್ ಅರ್ಷದಿ ದುವಾ ನೆರವೇರಸಿ,ಸಮಸ್ತದ ಸ್ಥಾಪನೆ ಹಾಗೂ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.
ಈ ಸಂದರ್ಭ ಮಸೀದಿ ಮಾಜಿ ಅಧ್ಯಕ್ಷ ಎ ಎಂ ಮಹಮ್ಮದ್ ಕುಂಞ ಸನ್ಯಾಸಿಹಿತ್ತಿಲು, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಹನೀಫ್ ಪರ್ಲಾರ್,ಪ್ರದಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಟಿ ಎಂ,ಕೋಶಾಧಿಕಾರಿ ಹಮೀದ್ ಟಿ,ಅಬ್ದುಲ್ ಕುಂಞ ಕೆ ಎಂ, ಹಸನ್ ಬಿ, ಅಬೂಬಕ್ಕರ್, ಹಾರಿಸ್ ಎಸ್ ಕೆ, ಮುಅದ್ಸಿನ್ ಆದಂ ಮುಸ್ಲಿಯಾರ್, ಹಾಗೂ ಪೋಷಕರು ಮತ್ತು ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.