May 6, 2026

ಮೂಲರಪಟ್ಣಸಂಭ್ರಮದ ಈದ್-ಉಲ್-ಅಝ್ಹ ಆಚರಣೆ

0
image_editor_output_image1783636748-1718642591806

ಬಂಟ್ವಾಳ ತಾಲೂಕಿನ ಅತೀ ಪುರಾತನ ಮಸೀದಿಗಳಲ್ಲೊಂದಾದ ಮೊಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ಣ ಇಲ್ಲಿ ಪವಿತ್ರ ಬಕ್ರೀದ್ ಹಬ್ಬವನ್ನು ಬಹಳ ವಿಜ್ರಂಭಣೆ, ಸಡಗರದಿಂದ ಆಚರಿಸಲಾಯಿತು.


ಮೊಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ಣ ಖತೀಬರಾದ ಬಹು!ಅಲ್ ಹಾಜ್ ಮೊಹಮ್ಮದ್ ಶೆರೀಫ್ ದಾರಿಮಿ ಪೆರ್ನಾಳ್ ಸಂದೇಶ ಭಾಷಣವನ್ನು ಮಾಡಿ ತ್ಯಾಗ, ಬಲಿದಾನ,ಸಮರ್ಪನೆಯ ಸಂಕೇತವಾದ ಪವಿತ್ರ ಈದ್ ಉಲ್ ಅಝ್ಹ ಹಲವು ವಿಚಾರಗಳಿಂದ ನೆನಪಿಸಬೇಕಾಗಿದೆ ಹಾಗೂ ತಕ್ವಯುತ ಜೀವನ ನಡೆಸಿ ಅಲ್ಲಾಹನ ಇಷ್ಟ ದಾಸರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಅರ್ಥಗರ್ಭಿತ ಮಾತುಗಳ ಮೂಲಕ ಮನ ಮುಟ್ಟುವಂತೆ ವಿವರಿಸಿದರು.ಬೆಳಿಗ್ಗೆ 7.30 ಕ್ಕೆ ಸರಿಯಾಗಿ ಪೆರ್ನಾಳ್ ನಮಾಝ್ ಹಾಗೂ ಖುತುಬಾ ನಿರ್ವಹಿಸಿದರು.ಪ್ರಸ್ತುತ ಸಾಲಿನಲಿ ಹಜ್ ಯಾತ್ರೆ ಕೈಗೊಂಡಿರುವ
ಮೊಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ಣ ಇದರ ಅಧ್ಯಕ್ಷ ಜ! ಎಮ್ ಬಿ ಅಶ್ರಫ್ ಮೂಲರಪಟ್ಣ,ವಿ.ಹೆಚ್ ಮೊಹಮ್ಮದ್,ಪುತ್ತಾಕ ಮಾರ್ಗದಂಗಡಿ ಇವರೆಲ್ಲರ ಹಜ್ ಖಬೂಲ್ ಮಾಡಲಿ ಎಂದು ವಿಶೇಷ ದುಆ ಗೈದರು.
ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಜ!ಬಾವಕ ವಾರಟೀಲು, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಎಚ್, ಜೊತೆ ಕಾರ್ಯದರ್ಶಿ ಹಕೀಂ ಎಮ್ ಎಸ್, ಮಸೀದಿ ಸಿಬ್ಬಂದಿ ಮೊಹಮ್ಮದ್ ರಶೀದ್ ಮೂಲರಪಟ್ಣ, ಮಾರ್ಗದಂಗಡಿ ಜುಮಾ ಮಸೀದಿ ಅಧ್ಯಕ್ಷ ಜ! ಎಮ್ ಎಸ್ ಬಶೀರ್, ದಾರುಲ್ ಉಲೂಂ ಮದ್ರಸ ಅಧ್ಯಕ್ಷ ಜ! ಎಮ್ ಪಿ ನಾಸಿರ್, ಜೀ.ಎಚ್.ಎಮ್. ಫೌಂಡೇಶನ್ (ರಿ) ಇದರ ಸ್ಥಾಪಕಾಧ್ಯಕ್ಷ ಹಂಝ ಗುತ್ತು, ಉದ್ಯಮಿ ಎಮ್ ಬಿ ಇಸ್ಮಾಯಿಲ್ ಶಾಫಿ,ಜಿ.ಕೆ ಖಾಸಿಂ, ಇಬ್ರಾಹಿಂ ಗುತ್ತು, ಅಬ್ದುಲ್ ಜಬ್ಬಾರ್ ಎಮ್ ಪಿ, ತೌಹೀದ್ ಎಮ್ ಬಿ ಹಾಗೂ ಹಲವು ಉಸ್ತಾದರು, ಜಮಾಅತ್ ಭಾಂಧವರೆಲ್ಲರೂ ಭಾಗಿಯಾದರು.ನುಸ್ರತುಲ್ ಅನಾಮ್ ಸ್ವಲಾತ್ ಕಮಿಟಿ ಮೂಲರಪಟ್ಣ ಇದರ ವತಿಯಿಂದ ಮಸೀದಿ ವಿದ್ಯುತ್ ಬಿಲ್ ಭರಿಸುವ ಸಲುವಾಗಿ 10,000 ರೂ ದೇಣಿಗೆ ರೂಪದಲ್ಲಿ ಮಸೀದಿಗೆ ಹಸ್ತಾಂತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!