May 6, 2026

ಉಪ್ಪಿನಂಗಡಿ: ಮಹಿಳೆ ಅನುಮಾನಾಸ್ಪದವಾಗಿ ಸಾವು

0
image_editor_output_image-1538011680-1718689194442.jpg

ಉಪ್ಪಿನಂಗಡಿ: ಇಲ್ಲಿನ ಪೆರ್ನೆ ಬಳಿಯ ಬಿಳಿಯೂರು ದರ್ಖಾಸ್ ಎಂಬಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ಹೇಮಾವತಿ (37) ಮೃತ ಮಹಿಳೆ. ಈಕೆ ತಾಯಿ, ಅಕ್ಕನ ಮಗನೊಂದಿಗೆ ಮನೆಯಲ್ಲಿದ್ದ ವೇಳೆ ಭಾನುವಾರ(ಜೂ.16) ರಾತ್ರಿ ಕೃತ್ಯ ನಡೆದಿದೆ.

ವಿಚಾರಣೆಗಾಗಿ ಮೃತಳ ಅಕ್ಕನ ಮಗ ಎಸ್ ಎಸ್ ಎಲ್ ಸಿ ಓದುತ್ತಿರುವ ಅಪ್ರಾಪ್ತ ಬಾಲಕನನ್ನು, ಆತನ ತಂದೆ ಶಂಕರ ಎಂಬವರನ್ನು ಕರೆದೊಯ್ದಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಉಪ್ಪಿನಂಗಡಿ ಪೊಲೀಸರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಷ್ಟೇ. ಮೃತರು ಹೊಟೇಲ್ ಕಾರ್ಮಿಕೆಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!