March 17, 2026

ಬಂಟ್ವಾಳ: ನರಹರಿ ಪರ್ವತದ ಬಳಿ ಪ್ರಾಣಿಯ ಅವಶೇಷ ಪತ್ತೆ: ಸ್ಥಳದಲ್ಲಿ  ಪೊಲೀಸರಿಂದ ತನಿಖೆ

0
image_editor_output_image1292432023-1718610542372

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರ ಮೆಲ್ಕಾರ್ ಕಲ್ಲಡ್ಕ ರಸ್ತೆಯ ಮಧ್ಯೆ ನರಹರಿ ಪರ್ವತದ ಬಳಿ ಚರಂಡಿಯಲ್ಲಿ ಮಾಂಸಕ್ಕಾಗಿ ಉಪಯೋಗಿಸಿದ ಪ್ರಾಣಿಯ ಅವಶೇಷಗಳು ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಹಲವಾರು ಅನುಮಾನಗಳು ಸೃಷ್ಟಿಯಾಗಿದ್ದು, ಪೋಲೀಸ್ ಇಲಾಖೆ ತನಿಖೆಗೆ ಮುಂದಾಗಿದೆ.

ಈಗಾಗಲೇ ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ‌.ರಾಮಕೃಷ್ಣ ಅವರು ಸ್ಥಳಕ್ಕೆ ಧಾವಿಸಿದ್ದು,ಮೇಲ್ನೋಟಕ್ಕೆ ಇದು ಕೋಳಿ ಹಾಗೂ ಕುರಿ,ಆಡುಗಳ ಅವಶೇಷಗಳಂತೆ ಕಾಣುತ್ತಿದ್ದು, ಪ್ರಸ್ತುತ ಗೋಹತ್ಯೆಯ ಆರೋಪಗಳು ಕೂಡ ಇರುವುದರಿಂದ ಪಶುಸಂಗೋಪನೆ ಇಲಾಖೆಯ ವೈದ್ಯರ ಮೂಲಕ ಅವಶೇಷಗಳ ಪರೀಕ್ಷೆ ನಡೆಸಿ ,ಯಾವ ಪ್ರಾಣಿ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪೋಲೀಸರು ಸಿದ್ದತೆ ನಡೆಸಿದ್ದಾರೆ.

ಕೋಳಿ,ಕುರಿ ಮತ್ತು ಆಡು ಮಾಂಸ: ವೈದ್ಯರ ಸ್ಪಷ್ಟನೆ

ಪೋಲೀಸರು ಪಶು ವೈದ್ಯರನ್ನು ಕರೆಯಿಸಿ ಅವಶೇಷಗಳ ಪರೀಕ್ಷೆ ನಡೆಸಿದಾಗ ಇದು ಕೋಳಿ,ಕುರಿ ಮತ್ತು ಆಡು ಪ್ರಾಣಿಗಳು ಅವಶೇಷವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಪರೀಕ್ಷೆ ನಡೆಸಿದ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಪ್ರಾಣಿಗಳನ್ನು ಕಡಿದ ಮಾಂಸ ಮಾಡಿದ ಬಳಿಕ ಉಳಿದ ಅವಶೇಷಗಳನ್ನು ಚರಂಡಿಯಲ್ಲಿ ಎಸೆದುಹೋಗಿದ್ದಾರೆ.

ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ

ಸಾರ್ವಜನಿಕ ಸ್ಥಳದಲ್ಲಿ ಅವಶೇಷಗಳನ್ನು ಬಿಸಾಡಿ ಮಲೀನ ಗೋಳಿಸಿದ ಬಗ್ಗೆ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಗಳ ಅವಶೇಷಗಳನ್ನು ಎಸೆದುಹೋದವರ ಪತ್ತೆ ಕಾರ್ಯಕ್ಕೆ ನಗರ ಠಾಣಾ ಪೋಲೀಸರ ತಂಡ ಮುಂದಾಗಿದೆ

Leave a Reply

Your email address will not be published. Required fields are marked *

You may have missed

error: Content is protected !!