March 17, 2026

ಅಪರಿಚಿತರಿಂದ ಗುಂಡಿನ ದಾಳಿ: ಪಟ್ಟಣ ಪಂಚಾಯತ್ BJP ಸದಸ್ಯೆಯ ಪತಿ ಸಾವು

0
image_editor_output_image-132454646-1718533603248.jpg

ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಗುಂಡಿನ‌ ಸದ್ದು ಕೇಳಿ ಬಂದಿದ್ದು, ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ರೌಡಿಶೀಟರ್ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಚಡಚಣ ತಾಲೂಕಿನ ನೀವರಗಿ ಗ್ರಾಮದಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ಪೆರೋಲ್ ಮೇಲೆ ಇತ್ತೀಚಿಗಷ್ಟೇ ಜೈಲಿನಿಂದ ಹೊರಬಂದಿದ್ದ ಅಶೋಕ ಮಲ್ಲಪ್ಪ ಗಂಟಗಲ್ಲಿ ಮೃತಪಟ್ಟವರು.

ಅಶೋಕ ಭಾನುವಾರ ಚಡಚಣ ಪಟ್ಟಣಕ್ಕೆ ಹೊರಡಲು ಸಿದ್ಧವಾಗಿ ಮನೆ ಬಳಿ ನಿಂತಿದ್ದಾಗ ಅಪರಿಚಿತರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಮೂರಕ್ಕೂ ಹೆಚ್ಚು ಗುಂಡುಗಳು ಬೆನ್ನು ಸೀಳಿದ್ದು, ಅಶೋಕ ವಿಪರೀತ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಲೆ ಹಾಗೂ ಇತರೆ ಪ್ರಕರಣಗಳಲ್ಲಿ ಶಿಕ್ಷೆಯಾಗಿ ಜೈಲು ಸೇರಿದ್ದ ಅಶೋಕ ಕೆಲ ದಿನಗಳ ಹಿಂದಷ್ಟೇ ಪೆರೋಲ್ ಮೇಲೆ ಹೊರಬಂದಿದ್ದ. ಹತ್ಯೆಯಾಗಿರುವ ಅಶೋಕನ ಪತ್ನಿ ಚಡಚಣ ಪಟ್ಟಣ ಪಂಚಾಯತ್ ಬಿಜೆಪಿ ಸದಸ್ಯೆಯಾಗಿದ್ದಾಳೆ.

Leave a Reply

Your email address will not be published. Required fields are marked *

You may have missed

error: Content is protected !!