ಹೊರಗಿನವರು ಬೋಳಿಯಾರ್ ಹೋಗಿ ಶಾಂತಿ ಕೆಡಿಸುವ ಕೆಲಸ: ಯು.ಟಿ. ಖಾದರ್

ಮುಡಿಪು: ಮಂಗಳೂರು ಕ್ಷೇತ್ರದಲ್ಲಿ ಸರ್ವಧರ್ಮದ ಜನರು ಸೌಹಾರ್ದದಿಂದ ವಾಸವಾಗಿದ್ದಾರೆ. ಕೆಲವು ಯುವಕರಿಂದಾಗಿ ಕ್ಷೇತ್ರಕ್ಕೆ ಕೆಟ್ಟ ಹೆಸರು ಬಂದಿದೆ. ಬೋಳಿಯಾರ್ ನಡೆದ ಘಟನೆಯ ಬಳಿಕ ಸ್ಥಳೀಯರೆ ಮುಂದೆ ನಿಂತು ಅಲ್ಲಿ ಸೌಹಾರ್ದ ನೆಲೆಸುವಂತೆ ಮಾಡಿದ್ದಾರೆ. ಹೊರಗಿನವರು ಅಲ್ಲಿಗೆ ಹೋಗಿ ಶಾಂತಿ ಕೆಡಿಸುವ ಕೆಲಸ ಮಾಡುವುದು ಬೇಡ ಎಂದು ಕ್ಷೇತ್ರದ ಶಾಸಕ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರು ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯಾರೋ ಹರಿಯ ಬಿಟ್ಟಿದ್ದಾರೆ. ಯಾರು ಹಾಕಿದ್ದಾರೆ ಎಂದು ಹೇಳಿದರೆ ನಾನೇ ಅವರಿಗೆ ಐದು ಸಾವಿರ ರೂ. ಕೊಡುತ್ತೇನೆ. ನಾನು ಒಳ್ಳೆಯವರಿಗೆ ಕಾಣುತ್ತೇನೆ. ಸಮಾಜ ವಿರೋಧಿಗಳಿಗೆ ಕಾಣುವುದಿಲ್ಲ ಎಂದು ಖಾದರ್ ಹೇಳಿದರು.