October 22, 2024

ವಿಟ್ಲ ಜೇಸಿ ಶಾಲೆ: ರೋಬೋಟಿಕ್ ಲ್ಯಾಬ್ ಉದ್ಘಾಟನೆ

0

ಆಧುನಿಕ ಜಗತ್ತಿಗೆ ಪೂರಕವಾಗುವ ಮಾಹಿತಿ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳನ್ನು ಉನ್ನತೀಕರಿಸಲು  ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ರೋಬೋಟಿಕ್ ತಂತ್ರಜ್ಞಾನಗಳ ಬಳಕೆ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಸಂಶೋಧನೆಗಳಿಗೆ ಆಸಕ್ತರಾಗುವಂತೆ ಮಾಡುತ್ತಿದೆ.


ಈ ನೆಲೆಯಲ್ಲಿ ವಿಟ್ಲದಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾ ಸಂಸ್ಥೆಯೊಂದು ಈ ರೀತಿಯ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತಿರುವುದು ಪ್ರಥಮ. ಸುಮಾರು 1200 ವಿದ್ಯಾರ್ಥಿಗಳಿರುವ  ವಿಠ್ಠಲ್         ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಈ ಸೌಲಭ್ಯವನ್ನು ಸಂಸ್ಥೆಯ ಆಡಳಿತ ಮಂಡಳಿಯು ಮಾಡಿಕೊಡುತ್ತಿದೆ. ಸ್ಟೆಮ್ ರೋಬೋ ಸಂಸ್ಥೆಯ ಸಹಯೋಗದೊಂದಿಗೆ ನಡೆಯುವ ಜೇಸಿ ರೋಬೋಟಿಕ್ ಲ್ಯಾಬ್ ನ ಉದ್ಘಾಟನಾ ಸಮಾರಂಭವನ್ನು ಆಳ್ವಾಸ್ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ಮೋಹನ್ ಆಳ್ವ ರವರು ನಡೆಸಿ ಕೊಡಲಿದ್ದಾರೆ . ಜೊತೆಗೆ ಸಂಸ್ಥೆಯ ಅಧ್ಯಕ್ಷರಾದ ಎಲ್.ಎನ್. ಕೂಡೂರು ಹಾಗೂ ಸ್ಟೆಮ್ ರೋಬೋ ದ ಮ್ಯಾನೇಜರ್  ಸರ್ವೇಶ್ ನಾಯಕ್ ರವರು ಉಪಸ್ಥಿತರಿರುವರು. ವಿದ್ಯಾಭಿಮಾನಿಗಳನ್ನು ,ಪೋಷಕರನ್ನು, ಆಡಳಿತ ಮಂಡಳಿ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಈ ಮೂಲಕ ಆಮಂತ್ರಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!