ಕಟೀಲು ದೇವಸ್ಥಾನಕ್ಕೆ ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಭೇಟಿ
ಮಂಗಳೂರು: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ ಇಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದರು.
ಪತ್ನಿ ಅಶಿತಾ ಸೂದ್ ಜೊತೆ ಕಟೀಲು ದೇವಸ್ಥಾನಕ್ಕೆ ತೆರಳಿದ ಅವರು ಅಕ್ಕಿ, ಬೆಲ್ಲ, ಅರಶಿನ ಒಳಗೊಂಡ ಮಡಿಲಕ್ಕಿಯನ್ನು ದೇವಿಗೆ ಸಮರ್ಪಿಸಿದರು. ಅನುವಂಶಿಕ ಅರ್ಚಕರಾದ ಕುಮಾರ್ ಅಸ್ರಣ್ಣ ಅವರು ವಸ್ತ್ರ ಮತ್ತು ಪ್ರಸಾದ ನೀಡಿ ಮಯಂಕ್ಗೆ ಗೌರವ ಸಲ್ಲಿಸಿದರು.




