ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ “ಎಂ ಎಸ್ ಮೊಹಮ್ಮದ್” ಸಮರ್ಥ ಆಯ್ಕೆ
ವಿಟ್ಲ: ಸುಮಾರು ನಲ್ವತ್ತು ವರ್ಷ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿ ನಿಷ್ಟಾವಂತ ಹಾಗೂ ಪ್ರಾಮಾಣಿಕ ವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಹಿರಿಯರ ಹಾಗೂ ಯುವಕರ ನಡುವೆ ಸದಾ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿರುವ ಸೌಮ್ಯ ಸ್ವಭಾವದ “ಎಂ ಎಸ್ ಮೊಹಮ್ಮದ್” ರವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿ ಎಂದು ಜಿಲ್ಲೆಯ ಹೆಚ್ಚಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಎನ್ನುವ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅದಲ್ಲದೆ, 2029ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮರು ಟಿಕೆಟ್ ನೀಡುವ ಮೂಲಕ ಒಂದು ಅವಕಾಶ ಕಲ್ಪಿಸಬೇಕಾಗಿದೆ. ಇಂದಿನಿಂದಲೇ ಮುಸ್ಲಿಮ್ ಸಮುದಾಯವು ಟಿಕೆಟ್ ಗಾಗಿ ಹೈಕಮಾಂಡ್ ಗೆ ಒತ್ತಡ ಹಾಕಬೇಕಾಗಿದೆ ಎನ್ನುವ ಕೂಗು ಕೇಳಿಬರುತ್ತಿವೆ.
ನಾವು ಅವರ ಕಡೆ,ಅಥವಾ ಇವರ ಕಡೆ ಅಂಥ ಏನೂ ಇಲ್ಲ ನಾವೇಣಿದ್ದರೂ ಕಾಂಗ್ರೆಸ್ ಪಕ್ಷ,ಸಂಘಟನೆ ಅಭಿವೃದ್ಧಿ ಕಡೆ ನಮ್ಮ ಅಭಿಪ್ರಾಯದಲ್ಲಿ “ಎಂ ಎಸ್ ಮೊಹಮ್ಮದ್” ರಂತಹ ನಿಷ್ಕಳಂಕ,ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ತನ್ನ ಕುಟುಂಬದ ಸದಷ್ಯರೆಂಬ ಭಾವನೆಯಿಂದ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆ ಯನ್ನು ಬಲಪಡಿಸುವ ಸಾಮರ್ಥ್ಯ ಉಳ್ಳವರು ಆಗಿದ್ದಾರೆ*
ಕೆಪಿಸಿಸಿ ಯ ಜವಾಬ್ದಾರಿ ಹೊತ್ತ ಇವರು ಧಾರ್ಮಿಕ, ಹಾಗೂ ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದವರು ಕೂಡ ಆಗಿದ್ದಾರೆ.
ಯಾರೊಂದಿಗೂ ಒಂದಲ್ಪ ದ್ವೇಷ,ವೈರಾಗ್ಯ ಇಟ್ಟುಕೊಳ್ಳದೆ ಕಾಂಗ್ರೆಸ್ ಪಕ್ಷದ ಉನ್ನತಿಗಾಗಿ ಜೀವನವನ್ನೇ ಮುಡಿಪಾಗಿಟ್ಟು ಎಲ್ಲರಿಗೂ ಮಾದರಿಯೋಗ್ಯ ನಾಯಕತ್ವ ನೀಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಅಭಿಮಾನ “ಎಂ ಎಸ್ ಮೊಹಮ್ಮದ್” ರಂತಹ ನಾಯಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ನೀಡಿ ಮತ್ತೊಮ್ಮೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಯಾಗಿ ತಲೆ ಎತ್ತಿ ನಿಲ್ಲಲು ಅವಕಾಶ ಮಾಡಿ ಕೊಡಬೇಕಾಗಿ ವಿನಂತಿ. ಈ ಮೊದಲು ಕೋಡಿಜಾಲ್ ಇಬ್ರಾಹಿಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ಸಂದರ್ಭದಲ್ಲಿ ಜಿಲ್ಲೆಯ ಎಂಟು ಕ್ಷೇತ್ರದಲ್ಲಿ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದದನ್ನು ನೆನಪಿಸುತ್ತಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂಬ ಹೆಸರಿನಲ್ಲಿ ಬರಹವೊಂದು ವೈರಲ್ ಆಗಿದೆ.





