ತೆಕ್ಕಟ್ಟೆ: ಬೈಕ್‌ಗೆ ಢಿಕ್ಕಿ ಹೊಡೆದ ಕಾರು: ಬೈಕ್ ಸವಾರ ಗಂಭೀರ

ತೆಕ್ಕಟ್ಟೆ: ಇಲ್ಲಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ್ನಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಜೂ. 1ರಂದು ಬೆಳಗ್ಗೆ ಸಂಭವಿದ್ದು, ಗಾಯಾಳು ಬೈಕ್ ಸವಾರ ಹೆಗ್ಗೊಡ್ಲು ಪಟ್ರೆ ನಿವಾಸಿ ಸಂಜೀವ ಪೂಜಾರಿ (50) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಕುಂದಾಪುರದ ಕಡೆಗೆ ಅತೀ ವೇಗದಿಂದ ಸಾಗುತ್ತಿದ್ದ ಕಾರು ಹಾಲಾಡಿ ಕಡೆಗೆ ಸಾಗುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ.