ಕೊಡಂಗಾಯಿ: ಶಾಲಾ ಪ್ರಾರಂಭೋತ್ಸವದ ಜೊತೆಗೆ ಪಠ್ಯ ಪುಸ್ತಕ ಹಾಗೂ ಜೊತೆ ಸಮವಸ್ತ್ರ ವಿತರಣೆ

ಕೊಡಂಗಾಯಿ: ಶಾಲಾ ಪ್ರಾರಂಭೋತ್ಸವದ ಜೊತೆಗೆ ಪಠ್ಯ ಪುಸ್ತಕ ಹಾಗೂ ಜೊತೆ ಸಮವಸ್ತ್ರ ವಿತರಣೆ ನಡೆಯಿತು.
ದ. ಕ. ಜಿ.ಪಂ.ಹಿ.ಪ್ರಾ. ಶಾಲೆ ಕೊಡಂಗಾಯಿ ಇದರ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜ| ಕೆ ಎ ಹಮೀದ್ ಮೂರ್ಜೆಬೆಟ್ಟು ಇವರ ಅದ್ಯಕ್ಷತೆಯಲ್ಲಿ ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಜರಗಿತು.
ಎಸ್,ಡಿ,ಎಂ,ಸಿ ಉಪಾಧ್ಯಕ್ಷರಾದ ಉಮೇಶ್ ಕೆ,ಎಸ್. ಡಿ,ಎಂ,ಸಿ ಮಾಜಿ ಉಪಾಧ್ಯಕ್ಷೆ ರೇಖಾ,ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷರಾದ ನಾರಾಯಣ ಭಟ್ ಪಳ್ಳಿಗದ್ದೆ, ಶಿಕ್ಷಣ ತಜ್ಞ ವಲ್ಲಭ ತಂತ್ರಿ,
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಮಜೀದ್ ಟಿ ಎಂ,
ಎಸ್ ಡಿ ಎಂ ಸಿ ಸದಸ್ಯರುಗಳಾದ ಅಬ್ದುಲ್ ಕುಂಞ ಇವರುಗಳು ಭಾಗವಹಿಸಿ ಮಕ್ಕಳಿಗೆ ಶುಭಹಾರೈಸಿದರು. ಶಿಕ್ಷಕಿಯರಾದ ಚೈತ್ರಾ, ಮೀನಾಕ್ಷಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ
ಶಾಲಾ ಮುಖ್ಯ ಶಿಕ್ಷಕಿ ಲೋಲಾಕ್ಷಿ ಎ ಸ್ವಾಗತಿಸಿ ಶಿಕ್ಷಕಿ ವಾಣಿಶ್ರೀ ಸಿ ವಂದಿಸಿದರು.
ವರದಿ: ಅಬೂ ಅಯಾನ್ ಕೊಡಂಗಾಯಿ
