ಉಡುಪಿ: ಮನೆಯಲ್ಲಿ ಕಸಯಿಖಾನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಕುಟುಂಬದ ಮೇಲೆ ಪೊಲೀಸರಿಂದ ದೌರ್ಜನ್ಯ
ಕಾಪು: ಹೈನುಗಾರಿಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಮುಸ್ಲಿಂ ಕುಟುಂಬವೊಂದು ಕಾಪು ಪೊಲೀಸರ ವಿರುದ್ಧ ದೌರ್ಜನ್ಯದ ಆರೋಪವನ್ನು ಮಾಡಿದೆ.
ಮನೆಯಲ್ಲಿ ಖಾಸಯಿಖಾನೆ ನಡೆಸಲಾಗುತ್ತದೆ ಎಂದು ಆರೋಪಿಸಿ ಇಂದು ಬೆಳಿಗ್ಗೆ ಯುನಿಫಾರ್ಮ್ ಹಾಕದ ಪೊಲೀಸರು ಮನೆಯ ಬಾಗಿಲು ಮುರಿದು ಮನೆಗೆ ನುಗ್ಗಿ ಹಲ್ಲೆ ನಡೆಸಿ, ಮಹಿಳೆಯರ ಬಟ್ಟೆ ಹರಿದು ದೌರ್ಜನ್ಯ ನಡೆಸಿರುವುದಾಗಿ ಕಾಪು ಪೊಲೀಸರ ಮೇಲೆ ಮುಸ್ಲಿಂ ಕುಟುಂಬ ಗಂಭೀರ ಆರೋಪ ಮಾಡಿದ್ದಾರೆ.
ಮಹಿಳೆಯರೇ ಇದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ಮಹಿಳೆಯರನ್ನು ಎಳೆದಾಡಲಾಗಿದೆ ಎಂದು ಆರೋಪಿಸಲಾಗಿದ್ದು, ನಮ್ಮ ವಾಹನವನ್ನು ಕೂಡ ಪೊಲೀಸರು ಸೀಝ್ ಮಾಡಿದ್ದಾರೆ ಹೇಳಿದ್ದಾರೆ.
ಇನ್ನು ಪೊಲೀಸ್ ದೌರ್ಜನ್ಯದಿಂದ ಗಾಯಗೊಂಡವರು ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.





