ಉಡುಪಿ: ರೈಲು ಡಿಕ್ಕಿ ಹೊಡೆದು ಚಿರತೆ ಸಾವು
ಉಡುಪಿ: ರೈಲು ಢಿಕ್ಕಿ ಹೊಡೆದು ಚಿರತೆಯೊಂದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಸಮೀಪ ಘಟನೆಯಾಗಿದೆ.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ರೈಲ್ವೆ ಬ್ರಿಡ್ಜ್ ನಿಂದ ಚಿರತೆ ಗದ್ದೆಗೆ ಎಸೆಯಲ್ಪಟ್ಟಿದೆ. ಆಹಾರ ಅರಸಿಕೊಂಡು ಬೆಟ್ಟದಿಂದ ಚಿರತೆ ಗ್ರಾಮದತ್ತ ಬಂದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಕುಂದಾಪುರ ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.





