March 24, 2026

ಭಾರೀ ಗಾಳಿ ಮಳೆಗೆ ಮರ ಬಿದ್ದು ಮಹಿಳೆ ಮೃತ್ಯು

0
image_editor_output_image-1622497602-1716873355536.jpg

ಯಾದಗಿರಿ: ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿವರೆಗೂ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಜಿಲ್ಲೆಯ ಯಾದಗಿರಿ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಶ್ವೇತಾ ರಾಠೋಡ್ ಮೃತ ಮಹಿಳೆ.

ಭಾನುವಾರ ಸಂಜೆ ಸುರಿದ ಧಾರಕಾರ ಮಳೆಯಲ್ಲೇ ಶ್ವೇತಾ ರಾಠೋಡ್ ನೀರು ತರಲು ಹೋಗಿದ್ದಾರೆ. ಈ ವೇಳೆ ಶ್ವೇತಾ ಮೇಲೆ ಮರ ಬಿದ್ದು ಗಂಭೀರವಾಗಿ ಗಾಯಗೊಂಡಿದ್ರು.

ಗಂಭೀರ ಗಾಯಗೊಂಡ ಶ್ವೇತರನ್ನ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಾಲತವಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಮಹಿಳೆ ಉಸಿರು ಚೆಲ್ಲಿದ್ದಾರೆ. ಈ ಸಂಬಂಧ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!