June 14, 2024

17ನೇ ಆವೃತ್ತಿ ಐಪಿಎಲ್ ಫೈನಲ್:  ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 8 ವಿಕೆಟ್ ಗಳ ಜಯ

0

ಚೆನ್ನೈ: ಇಲ್ಲಿನ ಚೆಪಾಕ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್‌ ಟೂರ್ನಿಯ 17ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹೈದರಬಾದ್‌ ತಂಡದ ವಿರುದ್ಧ ಕಕೆಆರ್ ತಂಡವು 8 ವಿಕೆಟ್ ಗಳ ಗೆಲುವು ಸಾಧಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಬೌಲರ್ ಗಳ ಚಂಡ ಮಾರುತದಂತೆ ಎರಗಿದ ದಾಳಿಗೆ ನಲುಗಿ 18.3 ಓವರ್ ಗಳಲ್ಲಿ ಐಪಿಎಲ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟಾಗಿದೆ.

ರಾಹುಲ್ ತ್ರಿಪಾಠಿ 9,ನಿತೀಶ್ ರೆಡ್ಡಿ 13,ಐಡೆನ್ ಮಾರ್ಕ್ರಾಮ್ 20 , ಶಹಬಾಜ್ ಅಹ್ಮದ್ 8,ಅಬ್ದುಲ್ ಸಮದ್ 4, ಹೆನ್ರಿಚ್ ಕ್ಲಾಸೆನ್ 16, ಜಯದೇವ್ ಉನದ್ಕತ್ 4 ರನ್ ಗಳಿಸಿ ಔಟಾದರು.

ಕೆಕೆಆರ್ ನ ಆಂಡ್ರೆ ರಸೆಲ್3 ವಿಕೆಟ್ , ಮಿಚೆಲ್ ಸ್ಟಾರ್ಕ್ 2ವಿಕೆಟ್ , ಹರ್ಷಿತ್ ರಾಣಾ 2 ವಿಕೆಟ್, ವರುಣ್ ಚಕ್ರವರ್ತಿ ಮತ್ತು ವೈಭವ್ ಅರೋರಾ ತಲಾ ಒಂದು ವಿಕೆಟ್ ಕಿತ್ತು ಮಾರಕವಾಗಿ ಪರಿಣಮಿಸಿದರು.

Leave a Reply

Your email address will not be published. Required fields are marked *

error: Content is protected !!