May 6, 2026

ಉಪ್ಪಿನಂಗಡಿ : ಕಾಡು ಪ್ರಾಣಿಗಳ ಬೇಟೆ: ಮೂವರು ಬೇಟೆಗಾರರ ಬಂಧನ

0
image_editor_output_image-534265320-1716525409526

ಪುತ್ತೂರು: ಅರಣ್ಯ ಇಲಾಖೆಗೆ ಸೇರಿದ ಕಾಡಿನಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಯತ್ನಿಸುತ್ತಿದ್ದ ಮೂವರನ್ನು  ಉಪ್ಪಿನಂಗಡಿ  ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿದೆ.

ಈ ವೇಳೆ ಆರೋಪಿಗಳಿಂದ ಒಂದು ಸಿಂಗಲ್ ಬ್ಯಾರೆಲ್ ಬಂದೂಕು, ಕಾರು ವಶಕ್ಕೆ ಪಡೆಯಲಾಗಿದೆ.

ಶಿಬಾಜೆ ಗ್ರಾಮದ ಕುರುಂಬು ಎಂಬಲ್ಲಿನ ಹರೀಶ್, ಸಕಲೇಶಪುರದ ಕೌಡಳ್ಳಿಯ ಶಿವಕುಮಾರ್, ಶಿಬಾಜೆಯ ಪದ್ಮನಾಭ ಬಂಧಿತರು .

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಗೆ ಸೇರಿದ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ- ಕಲ್ಲಾಜೆ ರಸ್ತೆಯ ಪತ್ತಿಮಾರ್ ಎಂಬಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ  ಆರೋಪಿಗಳು ಬೇಟೆಗೆ ಯತ್ನಿಸುತ್ತಿದ್ದಾಗ  ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ತಂಡ ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿ ವರದಿಯಾಗಿದೆ

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಅವಿನಾಶ್, ಶಿವಕುಮಾರ್ ಹೊಸ್ಮನಿ, ರವೀಂದ್ರ, ಬೀಟ್ ಫಾರೆಸ್ಟರ್ ನಿಂಗಪ್ಪ ಅವರಿ ಮತ್ತು ಚಾಲಕ ಕಿಶೋರ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!