February 4, 2026

ಹರೇಕಳ ಹಾಜಬ್ಬ ಕಟ್ಟಿದ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಮೂರನೇ ತರಗತಿ ವಿದ್ಯಾರ್ಥಿನಿ ಮೃತ್ಯು

0
n610291974171621535607780855d703a3c46940d18de383f2d57a1c068795813bcbe58b5ede3296a79bc26.jpg

ಮಂಗಳೂರು: ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಮೂರನೇ ತರಗತಿಯ ವಿದ್ಯಾರ್ಥಿನಿ ದಾರುಣವಾಗಿ ಸಾವನಪ್ಪಿದ ಘಟನೆ ದ.ಕ. ಜಿಲ್ಲೆಯ ‌ಉಳ್ಳಾಲ ತಾಲೂಕಿನ ನ್ಯೂಪಡ್ಪು ಶಾಲೆಯಲ್ಲಿ ನಡೆದಿದೆ.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಕಟ್ಟಿದ ಶಾಲೆ ಇದಾಗಿದ್ದು, ನ್ಯೂಪಡ್ಪು ನಿವಾಸಿ ಸಿದ್ದೀಖ್ ಜಮೀಲಾ ಪುತ್ರಿ ಶಾಜಿಯಾ (7) ಮೃತ ಬಾಲಕಿ.

3ನೇ ತರಗತಿಯಲ್ಲಿ ವಿದ್ಯಾರ್ಥಿನಿ ಓದುತ್ತಿದ್ದಳು. ಶಾಲೆಯಲ್ಲಿ ಎನ್‌ಎಸ್‌ಎಸ್ ಶಿಬಿರದಲ್ಲಿ ವಿದ್ಯಾರ್ಥಿನಿ ಭಾಗಿಯಾಗಿದ್ದಳು. ಆಟವಾಡುತ್ತಿದ್ದಾಗ ಕಾಂಪೌಂಡ್ ಕುಸಿದು ಬಿದ್ದು ಶಾಜಿಯಾ ದಾರುಣವಾಗಿ ಸಾವನಪ್ಪಿದ್ದಾಳೆ.

ಶಾಜಿಯಾ ಶಿಬಿರ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದಳು. ಬಾಲಕಿಯು ಗೇಟಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಆವರಣ ಗೋಡೆಯು ಆಕೆಯ ಮೇಲೆ ಕುಸಿದು ಬಿದ್ದಿತ್ತು. ಮಳೆಯಿಂದಾಗಿ ಆವರಣಗೋಡೆ ಒದ್ದೆಯಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!