October 22, 2026

ಅ.25 ರಂದು ಆಸ್ಟರಿಕ್ಸ್ ಟ್ರೋಫಿ ಫುಟ್ಬಾಲ್ ಟೂರ್ನಮೆಂಟ್, ಪೋಸ್ಟರ್ ಬಿಡುಗಡೆಗೊಳಿಸಿದ ಶಾಸಕ ಅಶೋಕ್ ರೈ

0
image_editor_output_image-1140757573-1792644406692

ವಿಟ್ಲ : ಆಸ್ಟರಿಕ್ಸ್ ಟ್ರೋಫಿ ಪ್ರಸ್ತುತಪಡಿಸುವ 7-A-Side ಫುಟ್ಬಾಲ್ ಟೂರ್ನಮೆಂಟ್ ಅಕ್ಟೋಬರ್ 25 ರಂದು ವಿಟ್ಲದ ಚಂದಳಿಕೆ ಮೈದಾನದಲ್ಲಿ ನಡೆಯಲಿದ್ದು, ಇದರ ಪೋಸ್ಟರ್ ಅನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಚಂದ್ರಹಾಸ ಶೆಟ್ಟಿ ಉಪ್ಪಿನಂಗಡಿ, ಈಶ್ವರ ಭಟ್ ಪಂಜಿಗುಡ್ಡೆ, ಆಸ್ಟರಿಕ್ಸ್ ಟ್ರೋಫಿಯ ಪ್ರಮುಖರಾದ ಮಾಹಿಝ್ ನೇರಳಕಟ್ಟೆ, ಯೂನುಸ್ ಕೂರ್ನಡ್ಕ , ಹಾಫಿಲ್ ವಿಟ್ಲ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಈ ಫುಟ್ಬಾಲ್ ಟೂರ್ನಿಯಲ್ಲಿ 7 ತಂಡಗಳು ಭಾಗವಹಿಸಲಿದ್ದು, ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!