ಮಗುವನ್ನು ಮರೆತು ಕಾರ್ ಲಾಕ್ ಮಾಡಿ ಮದುವೆಗೆ ತೆರಳಿದ ಪೋಷಕರು: ಉಸಿರುಗಟ್ಟಿ ಮಗು ಸಾವು
ರಾಜಸ್ಥಾನ: ಕೋಟಾದಲ್ಲಿ ಪೋಷಕರು ಮಗು ಒಳಗಿರೋರದನ್ನು ಮರೆತು ಕಾರ್ ಲಾಕ್ ಮಾಡಿದ್ದು, 3 ವರ್ಷದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮದುವೆಗೆ ಹೊರಟಿದ್ದ ಪೋಷಕರು ಮದುವೆ ಮನೆ ತಲುಪಿದಾಗ ಗಡಿಬಿಡಿಯಲ್ಲಿ ಕಾರು ಲಾಕ್ ಮಾಡಿ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಮಗು ಕಾರಿನೊಳಗಿದೆ ಎಂಬುದನ್ನು ಮರೆತುಬಿಟ್ಟಿದ್ದಾರೆ.
ಉಸಿರುಗಟ್ಟಿ ಮೂರು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಜೋರಾವರಪುರ ಗ್ರಾಮದಲ್ಲಿಘಟನೆ ನಡೆದಿದ್ದು, ಮೃತ ಬಾಲಕಿಯನ್ನು ಗೋರ್ವಿಕಾ ಎಂದು ಪೊಲೀಸರು ಗುರುತಿಸಿದ್ದಾರೆ.




