ಉಡುಪಿ: ದೇವಸ್ಥಾನಕ್ಕೆಂದು ಹೋದ ವಿದ್ಯಾರ್ಥಿ ನಾಪತ್ತೆ
ಉಡುಪಿ: ಕಲ್ಮಾಡಿ ಬಂಕೇರ್ ಕಟ್ಟ ನಿವಾಸಿ ಕವಿತಾ ಸುದರ್ಶನ್ ರವರ ಪುತ್ರ ವರುಣ್ (17) ಅಂಬಲಪಾಡಿ ದೇವಸ್ಥಾನಕ್ಕೆಂದು ಹೋದವನು ಮನೆಗೆ ಹಿಂದಿರುಗಿರುವುದಿಲ್ಲ.
ಕರಾವಳಿ ಬೈಪಾಸ್ ಬಳಿ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಹುಡುಗನನ್ನು ಕಂಡವರಿದ್ದಾರೆ. ಯಾರಾದರೂ ಈ ಹುಡುಗನನ್ನು ಕಂಡರೆ ಆಪತ್ಭಾಂಧವ ಈಶ್ವರ್ ಮಲ್ಪೆ 9663434415 ಅಥವಾ ಮನೆಯವರು 9964463502 ಈ ಸಂಖ್ಯೆಗೆ ಕರೆಮಾಡಿ ತಿಳಿಸಲು ಕೋರಿದ್ದಾರೆ.
ಈ ಹುಡುಗ ಮೌನಿಯಾಗಿದ್ದು ಮಾತನಾಡುವುದು ಕಡಿಮೆಯಾಗಿರುತ್ತದೆ. ಹಾಗಾಗಿ ಎಲ್ಲಾದರೂ ಒಬ್ಬನೇ ತನ್ನಷ್ಟಕ್ಕೆ ಕುಳಿತಿರಬಹುದು ಎಂದು ಹೇಳಲಾಗಿದೆ. ಸಾರ್ವಜನಿಕರು ಕಂಡಲ್ಲಿ ಮಾಹಿತಿ ನೀಡಲು ವಿನಂತಿಸಲಾಗಿದೆ.





