March 17, 2026

ಸುಳ್ಯ: ಮನೆಯ ಮೇಲೆ ಮರ ಬಿದ್ದು ಹಾನಿ, ಅಪಾಯದಿಂದ ಪಾರು

0
image_editor_output_image-159241844-1715927325303.jpg

ಸುಳ್ಯ: ಮನೆಯ ಹಿಂಬದಿ ಮರ ಬಿದ್ದು ಮನೆಯ ಅಡುಗೆ ಛಾವಣಿ ಹಾನಿಯಾಗಿ ಅಪಾರ ನಷ್ಟ ಉಂಟಾದ ಘಟನೆ ಇಂದು ಸುಳ್ಯ ಅರಂತೋಡು ಗ್ರಾಮದ ಕೊಡಂಕೇರಿ ಎಂಬಲ್ಲಿ ನಡೆದಿದೆ.

ಮಹಮ್ಮದ್ ಎಂಬವರ ಮನೆಯ ಹಿಂಬದಿ ಮರ ಮನೆಯ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಮನೆಯ ಸಿಮೆಂಟ್ ಶಿಟ್ ಮತ್ತು ಹಂಚುಗಳು ಹಾನಿಯಾಗಿದ್ದು ಸುಮಾರು ಒಂದುವರೆ ಲಕ್ಷದಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಘಟನೆ ಆಗುವ ಸಮಯದಲ್ಲಿ ಅಡುಗೆ ಕೋಣೆಯಲ್ಲಿ ಯಾರು ಇಲ್ಲದೆ ಇರುವುದರಿಂದ ಮನೆಯವರಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!