ಆಂಧ್ರ ಪ್ರದೇಶ: ಸಚಿವರ ಬೆಂಗಾವಲು ವಾಹನಕ್ಕೆ ಬೈಕ್ ಡಿಕ್ಕಿ:
ಓರ್ವ ಮೃತ್ಯು
ಆಂಧ್ರ ಪ್ರದೇಶ: ಪ್ರಕಾಶಂ ಜಿಲ್ಲೆಯಲ್ಲಿ ಗುರುವಾರ ಆಂಧ್ರಪ್ರದೇಶ ಶಿಕ್ಷಣ ಸಚಿವರ ಬೆಂಗಾವಲು ಪಡೆಯ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಗಾಯಾಳುವನ್ನು ಕರ್ನೂಲ್‌ನ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕಾಶಂ ಜಿಲ್ಲೆಯ ಪೇದರವೀಡು ಮಂಡಲದ ಗೊಬ್ಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ.
ಪೆದ್ದರವೀಡು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪಿ.ರಾಜೇಶ್ ಮಾಹಿತಿ ನೀಡಿ, ಸಚಿವರ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಿ.ಮಹೇಶ್ ಮತ್ತು ಅವರ ಪತ್ನಿ ಮಲ್ಲೇಶ್ವರಿ ದಂಪತಿಗಳು ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದರು. ಎದುರು ದಿಕ್ಕಿನಿಂದ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹೇಶ್ (31) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪತ್ನಿಗೆ ತೀವ್ರ ಗಾಯಗಳಾಗಿದೆ. ಅಪಘಾತ ಸಂಭವಿಸಿದಾಗ ಸಚಿವರು ಕಾರಿನಲ್ಲಿ ಇರಲಿಲ್ಲ ಮತ್ತು ಕಾರನ್ನು ಸರ್ವೀಸ್ ಉದ್ದೇಶಕ್ಕಾಗಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.





