February 3, 2026

ಬಾಲಿವುಡ್ ನಟಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅದ್ಧೂರಿ ಮದುವೆ ಸಮಾರಂಭ

0
IMG-20211210-WA0008.jpg

ಮುಂಬೈ: ಬಾಲಿವುಡ್ ನಟಿ ಕತ್ರೀನಾ ಕೈಫ್‌ ಹಾಗೂ ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಗುರುವಾರ ನಡೆದಿದೆ.

ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಉಪಸ್ಥಿತಿಯಲ್ಲಿ ವಿವಾಹ ಸಮಾರಂಭ ನಡೆದಿದೆ. ವಿವಾಹಪೂರ್ವ ಸಮಾರಂಭಗಳು ಡಿಸೆಂಬರ್ 7ರಿಂದಲೇ ಆರಂಭಗೊಂಡಿದ್ದವು.

ಕೌಶಲ್ ಅವರನ್ನು ವರಿಸಿರುವ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿರುವ ಕತ್ರೀನಾ, ‘ಈ ಕ್ಷಣ ನಮ್ಮ ಬಾಳಿನಲ್ಲಿ ಮೂಡಿಬರಲು ಕಾರಣವಾದ ಎಲ್ಲರಿಗೂ ಹೃದಯಾಂತರಾಳದ ಪ್ರೀತಿ ಮತ್ತು ಕೃತಜ್ಞತೆಗಳು. ನಾವು ಜೊತೆಯಾಗಿ ಈ ಹೊಸ ಪಯಣವನ್ನು ಆರಂಭಿಸುತ್ತಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವನ್ನು ಬಯಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ವಿವಾಹ ಸಮಾರಂಭಕ್ಕೆ ಕತ್ರೀನಾ ಅವರು ಖ್ಯಾತ ವಸ್ತ್ರವಿನ್ಯಾಸಕ ಸವ್ಯವಸಾಚಿ ಮುಖರ್ಜಿ ಅವರು ವಿನ್ಯಾಸಗೊಳಿಸಿದ್ದ ಲೆಹಂಗಾ ಧರಿಸಿದ್ದರೆ, ವಿಕ್ಕಿ ಕೌಶಲ್ ಶೇರ್ವಾನಿ ಧರಿಸಿ ಮಿಂಚಿದರು.

ವಿವಾಹ ಸಮಾರಂಭವು ತೀರಾ ಖಾಸಗಿಯಾಗಿ ನಡೆದಿದೆ. ಹೀಗಾಗಿ ಮದುವೆಗೆ ಆಹ್ವಾನಿಸದವರಿಗಾಗಿ ಸದ್ಯದಲ್ಲೇ ಮುಂಬೈಯಲ್ಲಿ ಔತಣಕೂಟ ಆಯೋಜಿಸುವುದಾಗಿ ನವ ಜೋಡಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!