March 17, 2026

ಸರ್ಕಾರಿ ಕೆಲಸ ಕೊಡಿಸುವುದಾಗಿ ಯುವಕರಿಂದ ಲಕ್ಷಾಂತರ ರೂ. ಪಡೆದು ವಂಚನೆ: ಸಿಐಡಿ ಸೂಪರಿಂಟೆಂಡೆಂಟ್‌ ಬಂಧನ

0
image_editor_output_image-1456572953-1715751478889.jpg

ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಸಿಐಡಿ ಘಟಕದ ಸೆಕ್ಷನ್ ಸೂಪರಿಂಟೆಂಡೆಂಟ್‌ ಸೇರಿ ಇಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಸಿಐಡಿ ಘಟಕದ ಆಡಳಿತ ವಿಭಾಗದ ಸೆಕ್ಷನ್ ಸೂಪರಿಂಟೆಂಡೆಂಟ್, ಬಿ.ಎಸ್.ಆ‌ರ್.ಪಿ.ಸಿ ಲೇಔಟ್‌ನ ನಿವಾಸಿ ಬಿ.ಎಸ್.ಅನಿತಾ(42) ಹಾಗೂ ಮಧ್ಯವರ್ತಿ ರಾಮಚಂದ್ರ ಭಟ್(56) ಬಂಧಿತರು.

ಚಿಕ್ಕಮಗಳೂರಿನ ಕಲ್ಯಾಣನಗರದ ಸುನಿಲ್ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!