March 17, 2026

ಉಡುಪಿ: ಹಿರಿಯಡ್ಕದ ಜಿಲ್ಲಾ ಕಾರಾಗೃಹದಲ್ಲಿ ಹೃದಯಾಘಾತದಿಂದ ಖೈದಿ ಸಾವು

0
image_editor_output_image1884196899-1715492080028.jpg

ಉಡುಪಿ: ಜಿಲ್ಲೆಯ ಹಿರಿಯಡ್ಕದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದೆ.

ಸಾವನ್ನಪ್ಪಿದ ಕೈದಿ ಅನುಪ್ ಶೆಟ್ಟಿ (38) ಎಂದು ತಿಳಿದು ಬಂದಿದೆ. ಅನೂಪ್ ಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯ ಸಾವು ಸಂಭವಿಸಿದೆ.

ಎರಡೂವರೆ ವರ್ಷಗಳಿಂದ ವಿಚಾರಾಧೀನ ಖೈದಿಯಾಗಿದ್ದ ಅನೂಪ್ ಶೆಟ್ಟಿ,ಕುಂದಾಪುರದ ಫೈನಾನ್ಶಿಯ‌ರ್ ಅಜೇಂದ್ರ ಶೆಟ್ಟಿ ಕೊಲೆ ಆರೋಪ ಎದುರಿಸುತ್ತಿದ್ದ.

Leave a Reply

Your email address will not be published. Required fields are marked *

You may have missed

error: Content is protected !!