May 6, 2026

ಭಾರತದ ಮುಸ್ಲಿಮರ ಜನಸಂಖ್ಯೆ ತೋರಿಸಲು ಪಾಕಿಸ್ತಾನ ಧ್ವಜ ಬಳಕೆ: ಭಾರೀ ಜನಾಕ್ರೋಶದ ಬಳಿಕ ಕ್ಷಮೆಕೇಳಿದ ಸುವರ್ಣ ನ್ಯೂಸ್

0
image_editor_output_image1221309784-1715425025999.jpg

ಬೆಂಗಳೂರು: ಭಾರತದ ಮುಸ್ಲಿಮರ ಜನಸಂಖ್ಯೆ ತೋರಿಸಲು ಸುವರ್ಣ ನ್ಯೂಸ್ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸುವರ್ಣ ನ್ಯೂಸ್ ವಿಷಾದ ವ್ಯಕ್ತಪಡಿಸಿದೆ.

ಇದು ಉದ್ದೇಶಪೂರ್ವಕವಾಗಿ ಆದ ತಪ್ಪಲ್ಲ, ‘ಕಣ್ತಪ್ಪಿನಿಂದ’ ಆದ ಅಚಾತುರ್ಯ ಎಂದು ಹೇಳಿದೆ.

ತಪ್ಪು ಗೊತ್ತಾದಕೂಡಲೇ ಗ್ರಾಫಿಕ್ಸ್ ಬದಲಾಯಿಸಲಾಗಿದೆ. ಈ ಅಚಾತುರ್ಯಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಸುವರ್ಣ ನ್ಯೂಸ್ ನಲ್ಲಿ ನಿರೂಪಕಿ ಹೇಳಿದ್ದಾರೆ.

ಅಜಿತ್ ಹನುಮಕ್ಕನವರ್ ಸುದ್ದಿ ವಿಶ್ಲೇಷಣೆ ಮಾಡಿದ್ದರು. ಸುದ್ದಿಯಲ್ಲಿ ಹಿಂದೂ ಮುಸ್ಲಿಮರ ಜನಸಂಖ್ಯೆ ತೋರಿಸುವಾಗ ಹಿಂದೂಗಳ ಜನಸಂಖ್ಯೆಗೆ ಭಾರತದ ಧ್ವಜ ಮತ್ತು ಮುಸ್ಲಿಮರ ಜನಸಂಖ್ಯೆಗೆ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಲಾಗಿತ್ತು.

ಇದರ ಸ್ಕ್ರೀನ್‌ ಶಾಟ್‌ ನ ವಿಡಿಯೋವನ್ನು ಆಲ್ಟ್‌ ನ್ಯೂಸ್‌ ನ ಸಹ ಸಂಸ್ಥಾಪಕ ಹಾಗೂ ಪತ್ರಕರ್ತ ಮುಹಮ್ಮದ್ ಝುಬೈರ್ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಬಳಿಕ ವಿಷಯ ಬಹಿರಂಗಗೊಂಡಿದೆ.

Leave a Reply

Your email address will not be published. Required fields are marked *

error: Content is protected !!