May 6, 2026

ಕೊಲ್ಲೂರು: ಯುವತಿಯ ಮೇಲೆ ಅತ್ಯಾಚಾರ: ಯುವಕನ ಬಂಧನ

0
image_editor_output_image817898053-1715414569487.jpg

ಕೊಲ್ಲೂರು: ಯುವತಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಯುವಕನನ್ನು ಕೊಲ್ಲೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಉಡುಪಿ ಸಮೀಪದ ನಿವಾಸಿ ಮಂಜುನಾಥ (24) ಬಂಧಿತ ಆರೋಪಿ. 24 ವರ್ಷದ ಯುವತಿ ನೀಡಿದ ದೂರಿನಡಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಯು ಅತ್ಯಾಚಾರ ನಡೆಸಿದ್ದಲ್ಲೇ ಯುವತಿಯ ಜೊತೆ ಇದ್ದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಬಗ್ಗೆಯೂ ಸಂತ್ರಸ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!